ಯೋಗೀಶಗೌಡ ಕೊಲೆ ಪ್ರಕರಣ..ಧಾರವಡಕ್ಕೆ ಆಗಮಿಸಿದ ಸಿಬಿಆಯ್…ತನಿಖಾಧಿಕಾರಿ ರಾಕೇಶ್ ರಂಜನ್ ತಂಡದಿಂದ ಕೊಲೆಯಾದ ಸ್ಥಳಕ್ಕೆ ಭೇಟಿ.
ಧಾರವಾಡ:-ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ರಾಕೇಶ ರಂಜನ ಆ್ಯಂಡ ಟೀಂ ಧಾರವಾಡಕ್ಕೆ ಆಗಮಿಸಿದ್ದು ಕೊಲೆ ನಡೆದ ಸ್ಥಳ ಕ್ಕೆ ಆಗಮಿಸಿದ್ದಾರೆ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ..
ಇಂದು ಬೆಳ್ಳಂ ಬೆಳೆಗ್ಗೆ ಆಗಮಿಸಿದ ಸಿಬಿಆಯ್ ಟೀಂ ವಿಶೇಷ ಪಬ್ಲಿಕ್ ಪ್ರಾಶ್ಯುಕ್ಯುಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿದರು.ಜೊತೆಗೆ ಸಿಬಿಆಯ್ ಟೀಂ ಗಂಗಾಧರ ಶೆಟ್ಟಿ ಅವರೊಂದಿಗೆ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಯೋಗೀಶಗೌಡ ಹತ್ಯೆ ಪ್ರಕರಣದ ಸಾಕ್ಷಿ ನಾಶದ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಅವರ ವಿರುದ್ದ ಈಗಾಗಲೇ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರ ವಿಚಾರಣೆ ನಡೆಯುತ್ತಿದೆ..