ಮೈಸೂರು
ಸಿಎಂ ಮನೆ ಒಳಗೆ ಹೋಗಲು ಕಾರ್ಯಕರ್ತನೊಬ್ಬ ಹೈಡ್ರಾಮಾ ನಡೆಸಿದ್ದಾರೆ.ಪೋಲೀಸರೊಂದಿಗೆ ವಾಗವಾದಕ್ಕಿಳಿದು ಎಲ್ಲರ ಗಮನ ಸೆಳೆದು ಸಿ.ಎಂ ಮನೆ ಒಳಗೆ ಹೋದ ಪ್ರಸಂಗ ನಡೆಯಿತು.
ಮ್ಯೆಸೂರಿನ ಸಿಎಂ ಮನೆ ಮನೆಗೆಬಂದ ಕಾರ್ಯಕರ್ತನನ್ನು ಪೊಲೀಸರು ತಡೆದಿದ್ದರ ಪರಿಣಾಮ ಕಾರ್ಯಕರ್ತ ರಂಪಾಟ ನಡೆಸಿದ್ದಾನೆ.ಬೆಂಗಳೂರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ.ಇಲ್ಲೇ ಸಾಹೇಬ್ರನ್ನ ನೋಡಬೇಕು ಬಿಡಿ ಎಂದು
ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದನ್ನಲ್ಲದೇ
ನಾವು ವೋಟ್ ಹಾಕಿದ್ದೀವಿ ನಾನು ಸಾಹೇಬ್ರನ್ನ ನೋಡಬೇಕು ಬಿಡಿ ಎಂದ ಕಾರ್ಯಕರ್ತ ಹಟ ಹಿಡಿದಿದ್ದನು.ಆ
ಕಾರ್ಯಕರ್ತನನ್ನ ಬಿಡದಿದ್ದಕ್ಕೆ ರಂಪಾಟ ನಡೆಸುತ್ತಿರುವಾಗ
ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಎಂ ಆಪ್ತ ಸಹಾಯಕ ಕುಮಾರ್ ಬಂದರೂ ಅವರನ್ನೂ ತರಾಟೆಗೂ ತೆಗೆದುಕೊಂಡು
ನಮ್ಮ ಫೋನ್ ಯಾಕೆ ರಿಸೀವ್ ಮಾಡಲ್ಲ ಎಂದು ಏರು ದನಿಯಲ್ಲೇ ಪ್ರಶ್ನಿಸಿದ.
ಈ ವೇಳೆ ಹೋಗಲಿ ಬಾ ಎಂದೇಳಿ ಒಳಗೆ ಕರೆದುಕೊಂಡು ಹೋದ ಸಿಎಂ ಆಪ್ತ ಕುಮಾರ್.
ಉದಯ ವಾರ್ತೆ ಮ್ಯೆಸೂರ.