ಸಿಬಿಐದವರು ನಿನ್ನೆ ಧಾರವಾಡಕ್ಕೆ ಬಂದು ಟಿಂಗರಿಕರ ಬಂಧನಕ್ಕೆಪ್ಲ್ಯಾನ್ ಮಾಡಿದ ಬೆನ್ನಲ್ಲೇ.. ಇಂದು ನ್ಯಾಯಾಲಯಕ್ಕೆ ಹಾಜರಾದ CPI ಚನ್ನಕೇಶವ ಟಿಂಗರಿಕರ್.
ಧಾರವಾಡ –
ಜಿಲ್ಲಾ ಪಂಚಾಯತನ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ ಕುರಿತಂತೆ ಪೊಲೀಸ್ ಅಧಿಕಾರಿ ಚನ್ನಕೇಶವ ಟಿಂಗರಿಕರ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.ಟಿಂಗರಿಕರ್ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪ್ರಕರಣದ ಆರೋಪಿಯಾಗಿದ್ದಾರೆ.ಪ್ರಕರಣದ 19 ನೇ ಆರೋಪಿಯಾಗಿರುವ ಇವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರಾದರು.ಬೆಂಗಳೂರಿನ ವಿಶೇಷ ಕೋರ್ಟ್ ಗೆ ಹಾಜರಾಗಿದ್ದಾರೆ.ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು ಕೋರ್ಟ್.ಹೀಗಾಗಿ ಮೂರು ಬಾರಿ ವಿಚಾರಣೆಗೆ ಗೈರಾಗಿದ್ದ ಟಿಂಗರಿಕರ್ ಇಂದು ಬೆಂಗಳೂರಿನಲ್ಲಿ ತಾವೇ ಖುದ್ದಾಗಿ ಹಾಜರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಗೊಳಿಸಿದ್ದ ಕೋರ್ಟ್ ಇದರೊಂದಿಗೆ ನಿನ್ನೇ ಧಾರವಾಡದಲ್ಲಿ ಸಿಬಿಐ ಅಧಿಕಾರಿಗಳು ಇವರ ನಿವಾಸದ ಮೇಲೆ ದಾಳಿಯನ್ನು ಮಾಡಿದ್ದರು ಬಂಧಿಸಲು ಬಂದಿದ್ದ ಸಿಬಿಐ ಅಧಿಕಾರಿಗಳ ಕಾರ್ಯಾಚರಣೆಯ ಬೆನ್ನಲ್ಲೇ ಮನೆಯಿಂದ ಪರಾರಿಯಾಗಿದ್ದರು ಇವರು.ಇಂದು ಕೋರ್ಟ್‌ಗೆ ಹಾಜರಾಗಿದ್ದಾರೆ ಆರೋಪಿ ಸ್ಥಾನದಲ್ಲಿರುವ ಇವರು.ಪ್ರಕರಣ ಐಓ ಆಗಿದ್ದರು ಇನ್ಸ್ಪೆಕ್ಟರ್ ಟಿಂಗರಿಕರ್.ಹತ್ಯೆ ನಡೆದಾಗ ಧಾರವಾಡ ಉಪನಗರ ಠಾಣೆ ಇನ್ಸ್ಪೆಕ್ಟರ್ ಆಗಿದ್ದರು ಟಿಂಗರಿಕರ್.ಈ ಹಿಂದೆ ಧಾರವಾಡ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನನ್ನು ಪಡೆದಿದ್ದರು ಇವರು.ಬಳಿಕ ಎಫ್‌ಐಆರ್‌ಗೆ ತಡೆ ತರಲು ಯತ್ನವನ್ನು ಮಾಡುತ್ತಿದ್ದಾರೆ.ಹೈಕೋರ್ಟ್ ಮೊರೆ ಹೋಗಿದ್ದ ಟಿಂಗರಿಕರ್ ಕಳೆದ ವಾರ ಇವರು ಈ ಒಂದು ಅರ್ಜಿಯನ್ನು ವಜಾಗೊಳಿಸಿತ್ತು ಹೈಕೋರ್ಟ್.2016ರ ಜೂನ್ 15ರಂದು ನಡೆದಿದ್ದ ಯೋಗೀಶಗೌಡ ಕೊಲೆ ಪ್ರಕರಣದ ಐಓ ಆಗಿದ್ದರು.ಬಳಿಕ ಸಿಬಿಐ ಗೆ ವಹಿಸಲಾಗಿದ್ದ ಪ್ರಕರಣದಲ್ಲಿ ಇವರನ್ನು ಕೂಡಾ ಆರೋಪಿಯನ್ನಾಗಿಸಿದೆ ಸಿಬಿ ಈ ಒಂದು ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ.
ಉದಯ ವಾರ್ತೆ ಧಾರವಾಡ