ನಗರಾಭಿವೃದ್ಧಿ ಇಲಾಖೆ ಎಡವಟ್ಟು.ಸತ್ತವರನ್ನು ವರ್ಗಾವಣೆ ಮಾಡಿದ ಇಲಾಖೆ.ವಿಧಾನಸೌದದಲ್ಲಿ ನಡೀತಾ ಇದೆ ಡೊಂಬರಾಟ..!!

Share to all

ನಗರಾಭಿವೃದ್ಧಿ ಇಲಾಖೆ ಎಡವಟ್ಟು.ಸತ್ತವರನ್ನು ವರ್ಗಾವಣೆ ಮಾಡಿದ ಇಲಾಖೆ.ವಿಧಾನಸೌದದಲ್ಲಿ ನಡೀತಾ ಇದೆ ಡೊಂಬರಾಟ..!!

ಬೆಂಗಳೂರು:- ರಾಜ್ಯ ಸರಕಾರ ಹೊರಡಿಸಿದ ಜನರಲ್ ಟ್ರಾನ್ಸ್ ಪರ್ ಅವದಿ ಇಂದಿಗೆ ಕೊನೆ ಆಗುತ್ತಿರುವ ಹಿನ್ನೆಲೆಯಲ್ಲಿ ನೌಕರರ ವರ್ಗಾವಣೆಯಲ್ಲಿ ವಿಧಾನಸೌಧದಲ್ಲಿ ಸಚಿವರ ಸಹಾಯಕರು ಅವರು ಏನೇನ ಮಾಡತಾ ಇದ್ದಾರೆ ಅಂತಾ ಅವರಿಗೆ ಗೊತ್ತಿಲ್ಲಾ.ಪ್ರಸಾದ ಬಂದು ಮುಟ್ಟಿದರೆ ಸಾಕು ಯಾವುದು ಆಗಬಾರದು ಅದು ಟಕಾ ಟಕ್ ಅಂತಾ ಟೈಪ್ ಆಗೇ ಬಿಡುತ್ತೇ.

 

ಹೌದು ಕಳೆದ ಆರು ತಿಂಗಳ ಹಿಂದೆಯೇ ಮೃತಪಟ್ಟ ವ್ಯಕ್ತಿಯೊಬ್ಬನನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜನೀಯರ ಅಶೋಕ ಪುಟಪಾಕ್ ಎಂಬುವರು ಸತ್ತು 6 ತಿಂಗಳುಗಳೇ ಕಳೆದಿವೆ ಅಂತಹ ವ್ಯಕ್ತಿ ಈಗ ವರ್ಗಾವಣೆ.

ಮೃತ ಅಶೋಕ ಪುಟಪಾಕ್ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ನಿವಾಸಿ ಅವರು ಸಾಯುವ ಮುನ್ನ ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜನೀಯರ್ ಆಗಿದ್ದರು.ಈಗ ಸರಕಾರದ ಆದೇಶದಲ್ಲಿ ಕೊಡಗಿಗೆ ವರ್ಗಾವಣೆ ಆಗಿದೆ.

ಉದಯ ವಾರ್ತೆ
ಬೆಂಗಳೂರು


Share to all

You May Also Like

More From Author