ಪಾಲಿಕೆಯ ಮ್ಯಾಜಿಕ್ ಚೇರ್ ಮೇಲೆ ಗಟ್ಟಿಯಾಗಿ ಕುಳಿತ ಕಾರ್ಯನಿರ್ವಾಹಕ ಅಭಿಯಂತರರು…ಸರಕಾರದ ವರ್ಗಾವಣೆ ನೀತಿ ಪಾಲಿಕೆಯ EE ಗಳಿಗೆ ಅನ್ವಯವಾಗುವುದಿಲ್ಲವೇ.

Share to all

ಪಾಲಿಕೆಯ ಮ್ಯಾಜಿಕ್ ಚೇರ್ ಮೇಲೆ ಗಟ್ಟಿಯಾಗಿ ಕುಳಿತ ಕಾರ್ಯನಿರ್ವಾಹಕ ಅಭಿಯಂತರರು…ಸರಕಾರದ ವರ್ಗಾವಣೆ ನೀತಿ ಪಾಲಿಕೆಯ EE ಗಳಿಗೆ ಅನ್ವಯವಾಗುವುದಿಲ್ಲವೇ.?

ಹುಬ್ಬಳ್ಳಿ:- ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಸುಮಾರು ವರ್ಷಗಳಿಂದ ಒಂದೇ ಕಡೆ ತಳವೂರಿ ಕುಳಿತಿರುವುದು ಸರಕಾರದ ಗಮನಕ್ಕಿಲ್ಲವಾ ಅಥವಾ ಇವರಿಗೆ ಸರಕಾರದ ವರ್ಗಾವಣೆ ನೀತಿ ಅನ್ವಯಿಸುವುದಿಲ್ಲವಾ ?

 

E ತಿಮ್ಮಪ್ಪ..ಅಧೀಕ್ಷಕ ಅಭಿಯಂತರರು (Sc)..ಆನಂದ ಕುಮಾರ ಜಳಕಿ.ಕಾರ್ಯನಿರ್ವಾಹಕ ಅಭಿಯಂತರರು (EE)..ವಿಠ್ಠಲ ತುಬಾಕಿ ಕಾರ್ಯನಿರ್ವಾಹಕ ಅಭಿಯಂತರರು (EE)..ಆರ್.ವಿಜಯಕುಮಾರ ಕಾರ್ಯನಿರ್ವಾಹಕ ಅಭಿಯಂತರರು (EE) ಇವರೆಲ್ಲಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಇಇ ಎಂಬ ಮ್ಯಾಜಿಕ್ ಚೇರ್ ಮೇಲೆ ಕುಳಿತಿರುವುದನ್ನು ನೋಡಿದರೇ ಸರಕಾರ ಇವರ ಕಡೆ ನೋಡಿಲ್ವಾ ಅಥವಾ ಸರಕಾರವನ್ನೇ ಇವರೇ ನೋಡಿಕೊಂಡಿದ್ದಾರಾ ಎಂಬ ಗುಮಾನಿ ಸಾರ್ವಜನಿಕರಲ್ಲಿ ಕಾಡತಾ ಇದೆ..

KCSR ರೂಲ್ ಪ್ರಕಾರ ಗ್ರುಪ್ “ಎ” ಅಧಿಕಾರಿಗಳು ಒಂದು ಸ್ಥಳದಲ್ಲಿ ಎರಡು ವರ್ಷ ಕರ್ತವ್ಯ ನಿರ್ವಹಿಸಬೇಕು.ಎರಡು ವರ್ಷ ಪೋರೈಸಿದ ಮೇಲೆ ಅಂತವರ ವರ್ಗಾವಣೆ ಆಗಲೇ ಬೇಕು. ಆದರೆ ಈ ಮೇಲಿನ EE ಗಳು ಪಾಲಿಕೆಯಲ್ಲಿ ಗಟ್ಟಿಯಾಗಿ ತಳವೂರಿರುವ ಹಿಂದಿನ ಗಮ್ಮತ್ತಾದರೂ ಏನು.?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗಟ್ಟಿಯಾಗಿ ಮೆಟ್ಟಿನಿಂತಿರುವ ಈ ಇಇ ಗಳ ಕಡೆ ಸರಕಾರ ಗಮನಹರಿಸಿ ಇವರನ್ನು ಪಾಲಿಕೆಯಿಂದ ಎತ್ತಂಗಡಿ ಮಾಡತಾರಾ..ಅಥವಾ ಕೈ ಬದಲಾವಣೆಯಾಗಿ ಇಲ್ಲೇ ಗಟ್ಟಿಯಾಗಿ ಉಳಿತಾರಾ ಕಾದು ನೋಡ ಬೇಕಾಗಿದೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author