ಹಳೆಯ ವೈಷಮ್ಯ.. ಎರಡು ಕುಟುಂಬಗಳ ಮಧ್ಯೆ ಹೊತ್ತಿದ ಕಿಡಿ.. ಶ್ಯಾಮ್ ಜಾದವ್, ರವಿ ಜಾದವ್ ಕುಟುಂಬಕ್ಕಿಲ್ಲಾ ರಕ್ಷಣೆ…
ಹುಬ್ಬಳ್ಳಿ:-ನಗರದ ಸೆಟಲ್ಮೆಂಟ್ ಪ್ರದೇಶದಲ್ಲಿ ಎರಡು ಜಾದವ್ ಕುಟುಂಬಗಳ ಮಧ್ಯೆ ಹಳೆ ವೈಸಮಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ.. ಆ ಘಟನೆಗೆ ಸಂಬಂಧಿಸಿದಂತೆ ಶ್ಯಾಮ್ ಜಾದವ್ ಹಾಗೂ ರವಿ ಜಾದವ್ ಕುಟುಂಬಸ್ಥರು ಇನ್ನೊಂದು ಜಾದವ್ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದು, ಜೊತೆಗೆ ಪೊಲೀಸರ ಕಾರ್ಯ ವೈಖರಿಯನ್ನು ಪ್ರಶ್ನಿಸಿದ್ದಾರೆ.
ಬೆಂಡಿಗೇರಿ ಪೊಲೀಸರು ನಾವು ಹಲವು ಬಾರಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಜಾದವ್ ಕುಟುಂಬದ ಮೇಲೆ ದೂರು ದಾಖಲಿಸಿದರೂ ಸಹ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.. ಅಲ್ಲದೆ ಕಳೆದ ಮೂರು ದಿನಗಳ ಹಿಂದೆ ನಮ್ಮ ಹುಡುಗರು ಆಸ್ಪತ್ರೆಗೆ ಹೋದಾಗ ಅವರ ಮೇಲೆ ಹಲ್ಲೆ ಮಾಡಿ ಅವರೇ ಹೋಗಿ ಪೊಲೀಸ್ ಠಾಣೆಯಲ್ಲಿ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ… ನಾವು ಹಲ್ಲೆಗೊಳಗಾಗಿ ದೂರು ದಾಖಲಿಸಲು ಹೋದರು ಬೆಂಡಿಗೇರಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.
ಹೀಗೆ ನಮ್ಮ ಮೇಲೆ ಸತತವಾಗಿ ಬಸವರಾಜ್ ಜಾದವ್ ಕುಟುಂಬಸ್ಥರು ಅಲ್ಲೇ ಮಾಡ್ತಾ ಬಂದ್ರು ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ.. ಅದರಿಂದ ಮಾನ್ಯ ಪೋಲಿಸ್ ಆಯುಕ್ತರು ಮಧ್ಯಸ್ಥಿಕ ವಹಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ರವಿ ಜಾದವ್ ಆಗ್ರಹಿಸಿದ್ದಾರೆ.