ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿದ ಶಾಸಕ ಎನ್ ಹೆಚ್ ಕೋನರೆಡ್ಡಿ – ನೂತನ 5 ಕೊಠಡಿಗಳನ್ನು ಲೋಕಾರ್ಪಣೆ ಮಾಡಿ ಕ್ಷೇತ್ರದಲ್ಲಿ ಮುಂದುವರೆದ ಅಭಿವೃದ್ದಿ ಕೆಲಸ ಕಾರ್ಯಗಳು
ನವಲಗುಂದ –
ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳು ಮುಂದುವರೆದಿವೆ.ಇನ್ನೂ ಈ ಒಂದು ಕೆಲಸ ಕಾರ್ಯಗಳ ನಡುವೆ ಕೆಲವೊಂದಿಷ್ಟು ಕ್ರೀಡಾ ಚಟುವಟಿಕೆಗಳು ಕೂಡಾ ನಡೆದಿದ್ದು ಕ್ಷೇತ್ರದ ನವಲಗುಂದ ವಿಧಾನಸಭಾ ಮತಕ್ಷೇತ್ರದ ಅಣ್ಣಿಗೇರಿಯ ಶಲವಡಿ ಗ್ರಾಮದಲ್ಲಿ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.ಈ ಒಂದು ಕ್ರೀಡಾಕೂಟಗಳಿಗೆ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಚಾಲನೆ ನೀಡಿದರು.ತಾಲ್ಲೂಕು ಮಟ್ಟದ ಈ ಒಂದು ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಿ ಗಾರವಿಸಿದರು.ನಂತರ ಗುರು ಗುರುಶಾಂತೇಶ್ವರ ಕರ್ನಾಟಕ ಪಬ್ಲೀಕ್ ಶಾಲೆ (ಪದವಿ ಪೂರ್ವ ಕಾಲೇಜು ವಿಭಾಗ), ಶಲವಡಿ ಇದರ ನೂತನ 5 ಕೊಠಡಿಗಳ ಉದ್ಘಾಟನೆಯನ್ನು ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಶಾಲಾ ಆಡಳಿತ ಮಂಡಳಿಯವರು,ಶಿಕ್ಷಕ ವೃಂದದವರು, ಗ್ರಾಮ ಪಂಚಾಯತಿಯ ಸದಸ್ಯರು, ಮುದ್ದು ವಿದ್ಯಾರ್ಥಿಗಳು ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಉದಯ ವಾರ್ತೆ ಹುಬ್ಬಳ್ಳಿ