ಹೊಸಪೇಟೆ ಬಳಿ ಭೀಕರ ರಸ್ತೆ ಅಪಘಾತ.ಸ್ಥಳದಲ್ಲಿಯೇ ಏಳು ಸಾವು.
ಹೊಸಪೇಟೆ
ಲಾರಿ ಹಾಗೂ ಕ್ರೂಸರ್ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಏಳು ಜನರು ಸಾವನ್ನಪ್ಪಿದ ಘಟನೆ ಹೊಸಪೇಟೆ ಬಳಿ ಜರುಗಿದೆ.
ಹೊಸಪೇಟೆಯ ವ್ಯಾಸನ ಕೆರೆ ಬಳಿ ಅಪಘಾತ ನಡೆದಿದ್ದು
ಹೊಸಪೇಟೆಯಿಂದ ಮರಿಯಮ್ಮನಹಳ್ಳಿಗೆ ಹೊರಟಿದ್ದ ಕ್ರೂಸರ್ ಮತ್ತು ಲಾರಿ ಮುಖಾ ಮುಖಿ ಡಿಕ್ಕಿಯಾಗಿದೆ ಮ್ರತರೆಲ್ಲರೂ ಹೊಸಪೇಟಯವರು ಎನ್ನಲಾಗಿದೆ.ಹರಪನಹಳ್ಳಿ ಬಳಿ ಗೋಣಿ ಬಸವೇಶ್ವರ ದೇವಸ್ಥಾನ ಕ್ಕೆ ಹೋಗಿ ವಾಪಸ್ಸು ಬರುವಾಗ ಈ ಘಟನೆ ಜರುಗಿದೆ.
ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾವು ಹೆಚ್ಚಾಗೋ ಸಾಧ್ಯತೆಯಿದ್ದು ಮ್ರತರ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಉದಯ ವಾರ್ತೆ ಹೊಸಪೇಟೆ