ಒಂದೇ ಸ್ಥಳದಲ್ಲಿ ಐದು ವರ್ಷ ಪೋರೈಸಿದ ಪೋಲೀಸರ ವರ್ಗಾವಣೆಗೆ ಸರಕಾರದ ಆದೇಶ.ಆದೇಶ ಬಂದ ಕೆಲವೇ ಘಂಟೆಗಳಲ್ಲಿ ಕೌನ್ಸಲಿಂಗ್ ಕರೆದ ಹುಬ್ಬಳ್ಳಿ-ಧಾರವಾಡ ಕಮೀಷನರ್.
ಹುಬ್ಬಳ್ಳಿ:-ಕಳೆದ 6-7-2024 ರಂದು ಮುಖ್ಯಮಂತ್ರಿಗಳು ಹಾಗೂ ಹೋಮ್ ಮಿನಿಸ್ಟರ್ ನೇತೃತ್ವದಲ್ಲಿ ನಡೆದ ಹಿರಿಯ ಪೋಲೀಸ ಅಧಿಕಾರಿಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ಸರಕಾರ ಇಂದು ಪೋಲೀಸರ ವರ್ಗಾವಣೆ ಕುರಿತು ಆದೇಶ ಹೊರಡಿಸಿದೆ.
ಇಂದು ಡೈರೆಕ್ಟರ್ ಮತ್ತು ಜನರಲ್ ಇನ್ಸ್ಪೆಕ್ಟರ್ ಜನರಲ್ ಆಪ್ ಪೋಲೀಸ ಅವರು ಒಂದೇ ಸ್ಥಳದಲ್ಲಿ ಐದು ವರ್ಷ ಪೋರೈಸಿದ ಪಿಸಿ,ಎಚ್ ಸಿ,ಎಎಸ್ಐ,ಸಿಬ್ಬಂದಿಗಳನ್ನು ತಕ್ಷಣ ವರ್ಗಾವಣೆ ಮಾಡಿ ಕೈಕೊಂಡ ಕ್ರಮದ ಬಗ್ಗೆ ಮಾಹಿತಿ ಒದಗಿಸುವಂತೆ ಆದೇಶ ಮಾಡಲಾಗಿದೆ.
ಸರಕಾರ ಆದೇಶ ಮಾಡಿದ ಕೆಲವೇ ಘಂಟೆಗಳಲ್ಲಿ ಐದು ವರ್ಷ ಪೋರೈಸಿದ ಸಿಬ್ಬಂದಿಗಳ ಕೌನ್ಸಲಿಂಗ್ ಕರೆದ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್.ಶಶಿಕುಮಾರ ಸಿಬ್ಬಂದಿಗಳ ವರ್ಗಾವಣೆ ಲಿಸ್ಟ್ ರೆಡಿಮಾಡಿದ್ದಾರೆ.