ಬಂಗಾರದ ಅಂಗಡಿಗೆ ಕನ್ನ ಹಾಕಿದ ಖದೀಮರು..ಸಿಟಿ ಮದ್ಯದಲ್ಲೇ ದೊಡ್ಡ ಮಟ್ಟದ ಕಳ್ಳತನ ಮಾಡಿ ಟಪ್ ಕಮೀಷನರಿಗೆ ಚಾಲೇಂಜ್ ನೀಡಿದ ಮಹಾ ಚಾಲಾಕಿ ಕಳ್ಳರು.
ಹುಬ್ಬಳ್ಳಿ:- ಗ್ಯಾಸ್ ಕಟರ್ ನಿಂದ ಕೀಲಿ ಮುರಿದ ದೊಡ್ಡ ಪ್ರಮಾಣದ ಕಳ್ಳತವೊಂದು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ನಡೆದಿದೆ.ಜ್ಯುವೆಲರಿ ಅಂಗಡಿಗೆ ನುಗ್ಗಿದ ಕಳ್ಳರು 800 ಗ್ರಾಂ ಚಿನ್ನ 50 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.
ನಗರದ ರಮೇಶ ಭವನ ಬಳಿ ಇರುವ ಜಗದೀಶ ದೈವಜ್ಞ ಎಂಬುವರಿಗೆ ಸೇರಿದ ಭುವನೇಶ್ವರಿ ಜ್ಯುವೆಲರಿಗೆ ನುಗ್ಗಿದ ಚಾಲಾಕಿ ಕಳ್ಳರು ಸಿಸಿ ಕ್ಯಾಮಾರಕ್ಕೆ ಸ್ಪ್ರೇ ಮಾಡಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೋಲೀಸ ಆಯುಕ್ತ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಲ್ಲದೇ ಕಳ್ಳರ ಪತ್ತೆಗಾಗಿ ತಂಡ ರಚನೆ ಮಾಡಿದ್ದಾರೆ.