ಧಾರವಾಡ.
ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರಿಕರ ಅವರ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ.
ಯೋಗೀಶಗೌಡ ಕೊಲೆ ಪ್ರಕರಣ ನಡೆದಾಗ ಟಿಂಗರಿಕರ ಅವರು ಐಓ ಆಗಿದ್ದರು.ಆ ಕೊಲೆ ಪ್ರಕರಣದಲ್ಲಿ ತನಿಖೆಯನ್ನ ಹಾಗೂ ಆರೋಪಿಗಳನ್ನ ಬಂದಿಸುವಲ್ಲಿ ತಾರತಮ್ಯ ಎಸಗಿದ ಆರೋಪದಡಿ ಅವರ ಮೇಲೂ ಸಿಬಿಐ ಪ್ರಕರಣ ದಾಖಲಿಸಿತ್ತು.ಹೀಗಾಗಿ ಜಾಮೀನಿನ ಮೇಲೆ ಹೊಗಿದ್ದ ಟಿಂಗರಿಕರ ಈಗಾಗಲೇ ಮೂರು ಬಾರಿ ನ್ಯಾಯಾಲಯಕ್ಕೆ ಹಾಜರಾಗಿರದ ಕಾರಣ ಅವರಿಗೆ ಬಾಡಿ ವಾರೆಂಟ್ ಜಾರಿಯಾಗಿತ್ತು.ಇಂದು ಟಿಂಗರಿಕರ ನ್ಯಾಯಾಲಯಕ್ಕೆ ಹಾಜರಾಗಿ ವಾರೆಂಟ್ ರೀ ಕಾಲ್ ಮಾಡಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಆ ಹಿನ್ನೆಲೆಯಲ್ಲಿ ನ್ಯಾಯಾಲಯ ವಾರೆಂಟ್ ಹಿಂಪಡೆದು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಬೆಳೆಗ್ಗೆಯಿಂದ ಕೋಟ್೯ ಕಸ್ಟಡಿಯಲ್ಲಿದ್ದ ಟಿಂಗರಿಕರ ಸಂಜೆ ವೇಳೆಗೆ ಕೋಟ್೯ ಕಸ್ಟಡಿಯಿಂದ ರಿಯಾಯಿತಿ ದೊರೆತಿದೆ.
ಉದಯ ವಾರ್ತೆ ಧಾರವಾಡ