ಪಾಲಿಕೆಯ ಆಯುಕ್ತರಿಂದ ಜೋನಲ್ ಸ್ಪಷಲ್ ಡ್ರೈವ್..ಸಿಬ್ಬಂದಿಗಳ ಕಡತ ಪರಿಶೀಲಿಸಿದ ಕಮೀಷನರ್.ಸಾರ್ವಜನಿಕರ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಎಚ್ಚರಿಕೆ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಹಾಗೂ ಮೇಯರ್ ಇಂದು ಜೋನಲ್ ಸ್ಪೆಷಲ್ ಡ್ರೈವ್ ನಡೆಸಿದರು.ವಲಯ ಕಚೇರಿ 4 ಕ್ಕೆ ದಿಡೀರ ಭೇಟಿ ನೀಡಿದ ಆಯುಕ್ತರು ಮತ್ತು ಮೇಯರ್ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದೇ ಇಟ್ಟಿರುವ ಕಡತಗಳನ್ನು ನೋಡಿದ ಆಯುಕ್ತರು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡರಲ್ಲದೇ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹಾರವನ್ನು ನೀಡಿದರು.
ಅಲ್ಲದೇ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನವನಗರ ವ್ಯಾಪ್ತಿಯ ಕೆಲವು ವಾಡ್೯ಗಳಿಗೆ ಭೇಟಿ ನೀಡಿ ಡೆಂಗ್ಯೂ ಕುರಿತು ಮಾಹಿತಿ ನೀಡಿದರು.ಅಲ್ಲದೇ ಮಳೆ ನೀರು,ಯುಜಿಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸಲು ಸಂಬಂಧಿಸಿದ ಎಂಜನೀಯರಗಳಿಗೆ ಆಯುಕ್ತರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮೇಯರ್,ಉಪಮೇಯರ್ ಪಾಲಿಕೆಯ ಸದಸ್ಯರು ಹಾಗೂ ಅಭಿಯಂತರರಾದ ಮಂಜುನಾಥ ದೊಡವಾಡ,ಮಂಜುಳಾ ಹಿರೇಮಠ,ಸೌಮ್ಯ ರಜಪೂತ, ಆರೋಗ್ಯ ನಿರೀಕ್ಷಕರಾದ ಮಹಾಂತೇಶ ಮ್ಯಾಗೇರಿ ಹಾಜರಿದ್ದರು.