ಮೇಕಪ್..ಮೇಕಪ್.ಬೇಡಾ ಬೇಡಾ ಅಂದರೂ ಕೇಳಲಿಲ್ಲಾ ಪತ್ನಿ..ಪತ್ನಿಯ ಮೇಕಪ್ ಮತ್ತು ಪೋನ್ ಶೋಕಿಗೆ ಪತಿ ಬಲಿ..
ನೆಲಮಂಗಲ:-ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು.ಮೇಕಪ್ ಕಡಿಮೆ ಮಾಡು.ಪೋನ್ ಕಡಿಮೆ ಮಾಡು ಅಂದ ಪತಿ.ಇಲ್ಲಾ ನನಗೆ ನಿನಗಿಂತ ಮೇಕಪ್ ಪೋನ್ ಬೇಕು ಎಂದ ಪತ್ನಿ. ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ತೊಣಚಿನೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಅಸ್ಸಾಂ ಮೂಲದ ಗುಲ್ಜಾನ್ ಹುಸೇನ್ ಚೌದರಿ ಲಾರಿ ಚಾಲಕನಾಗಿದ್ದು.ಗಂಡ ಹೆಂಡತಿ ಮದ್ಯೆ ಆಗಾಗ ಪತ್ನಿ ಮಾಡಿಕೊಳ್ಳುವ ಮೇಕಪ್ ಮತ್ತು ಅತಿಯಾದ ಮೋಬೈಲ್ ಬಳಕೆ ಸಂಭಂದ ಜಗಳ ನಡೆಯುತ್ತಿತ್ತಂತೆ.ಎಷ್ಟೇ ಹೇಳಿದರೂ ಪತಿ ಮಾತು ಕೇಳದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ನೆಲಮಂಗಲ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ನಡೆಸಿದ್ದಾರೆ.