ಸರಕಾರಿ ಬಸ್ ಚಾಲಕನ ರೀಲ್ಸ್ ಹುಚ್ಚಾಟ..ರೈತನ ಎರಡು ಎತ್ತು ಬಲಿ.ರೀಲ್ಸ್ ಗುಂಗಿನಲ್ಲಿ ಚಕ್ಕಡಿಗೆ ಗುದ್ದಿದ ಬಸ್ ಚಾಲಕ..
ಹುಬ್ಬಳ್ಳಿ:- ಮೋಬೈಲ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಸರಕಾರಿ ಬಸ್ ಚಾಲಕನೊಬ್ಬ ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸಾವನ್ನಪ್ಪಿದ್ದು ಇಬ್ಬರು ರೈತರಿಗೆ ಗಂಭೀರವಾದ ಗಾಯವಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಬಳಿ ನಡೆದಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿದ್ದ ಸರಕಾರಿ ಬಸ್ಸಿನ ಡ್ರೈವರ್ ಮೋಬೈಲನಲ್ಲಿ ರೀಲ್ಸ್ ಮಾಡುತ್ತಿದ್ದಾಗ ಬಸ್ಸಿನ ಮುಂದೆ ಇದ್ದ ಚಕ್ಕಡಿ ಕಾಣದೇ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಬಲಿಯಾಗಿವೆ.
ಅಲ್ಲದೇ ಇಬ್ಬರು ರೈತರಿಗೆ ಗಂಭೀರವಾಗಿ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ತನಿಖೆ ನಡೆಸಿದ್ದಾರೆ.