ಚಾಲಕನ ರೀಲ್ಸ್ ಹುಚ್ಚಾಟ ಎಕ್ಸಿಡೆಂಟ್ ಪ್ರಕರಣ..ಗ್ರಾಮಸ್ಥರಿಂದ ಪೋಲೀಸರಿಗೆ ದೂರು..ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಚಾಲಕನ ವಿರುದ್ಧ FIR..
ಹುಬ್ಬಳ್ಳಿ:- ನಿನ್ನೆ ಹುಬ್ಬಳ್ಳಿ ಸಮೀಪ ಕುಸಗಲ್ಲ ಗ್ರಾಮದ ಬಳಿ ಸಾರಿಗೆ ಬಸ್ಸಿನ ಡ್ರೈವರ್ ರೀಲ್ಸ್ ಹುಚ್ಚಾಟದಿಂದ ಅಪಘಾತವಾಗಿ ಎರಡು ಎತ್ತುಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಚಾಲಕ ರಮೇಶ ವಿರುದ್ದ FIR ದಾಖಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ವಿಭಾಗದ ಸಾರಿಗೆ ಘಟಕದಲ್ಲಿ ಚಾಲಕನಾಗಿರುವ ರಮೇಶ ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ನಿವಾಸಿಯಾಗಿದ್ದಾರೆ.ಇವರು ನಿನ್ನೆ ಸಾಯಂಕಾಲ ರೀಲ್ಸ್ ಮಾಡುವ ಭರದಲ್ಲಿ ಹಿಂಬದಿಯಿಂದ ಚಕ್ಕಡಿಗೆ ಗುದ್ದಿದ್ದರು.
ರಭಸವಾಗಿ ಬಸ್ಸು ಚಕ್ಕಡಿಗೆ ಗುದ್ದಿದ ಹಿನ್ನೆಲೆಯಲ್ಲಿ ಎರಡು ಎತ್ತುಗಳು ಸಾವನ್ನಪ್ಪಿ ಚಕ್ಕಡಿಯಲ್ಲಿದ್ದ ರೈತ ಮಂಜುನಾಥ ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.