ಹುಬ್ಬಳ್ಳಿ
ಆ ಪೊಲಿಸ್ ಸಿಬ್ಬಂದಿ ಕೆಲಸ ಮಾಡೋದು ಒಂದು ಠಾಣೆ ಆದ್ರೆ ಆತನ ದರ್ಪಕ್ಕೆ ಠಾಣೆಯ ಲಿಮಿಟ್ಸ್ ಇಲ್ಲ.ಖಾಕಿ ಮರೆತ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಮೊಬೈಲ್ ಹಿಡಿದು ಶೂಟಿಂಗ್ ಕೂಡಾ ಮಾಡ್ತಾನೆ.ಠಾಣೆಗೆ ಬಂದವರದ್ದು ಶೂಟಿಂಗ್ ಮಾಡೋ ಸಿಬ್ಬಂದಿ ,ಠಾಣೆಗೆ ಬಂದವರ ಮೊಬೈಲ್ ಕಸಿದುಕೊಂಡ ಪೊಲೀಸ್ ಸಿಬ್ಬಂದಿ ಸ್ಟೋರಿ ಇದು.
ಸ್ವಾಮಿಗಳೊಬ್ಬರ ಹೊಡೆತಕ್ಕೆ ಧಾರವಾಡಕ್ಕೆ ಹೋಗಿದ್ದ ಪೋಲೀಸ ಇನಪ್ಲ್ಯೂನ್ಸ್ ಮಾಡಿ ಮತ್ತೆ ಹುಬ್ಬಳ್ಳಿ ಠಾಣೆಯೊಂದಕ್ಕೆ ವಾಪಸ್ ಬಂದು ಮತ್ತೇ ಹಳೇ ಚಾಳಿ ಮುಂದುವರಿಸಿದ್ದಾನೆ
ಸ್ವಾಮಿಗಳೊಬ್ಬರ ಪ್ರಸಾದ ತಿಂದಿದ್ದು ಮಾಸುವ ಮುನ್ನವೇ ಹಗ್ಗ ತಿನ್ನುವ ಚಾಳಿ ಮುಂದುವರೆಸಿದ್ದಾನಂತೆ.
ಹುಬ್ಬಳ್ಳಿ ಠಾಣೆಗೆ ಬಂದು ಒಂದು ತಿಂಗಳು ಕಾಲ ಸುಮ್ಮನಿದ್ದ ಆ ಆಸಾಮಿ ತನ್ನ ಠಾಣಾ ವ್ಯಾಪ್ತಿಯಲ್ಲಿಯ ಸಾಯಿಬಾಬಾನ ಪ್ರಸಾದ ಬಿಟ್ಟು ಕೇಶ್ವಾಪುರದ ಕೇಶವನ ಪ್ರಸಾದವನ್ನು ತಿನ್ನಲು ಸ್ಟಾಟ್೯ ಮಾಡಿದ್ದಾನಂತೆ.
ಕಳೆದ ರವಿವಾರ ಮದ್ಯಾಹ್ನ ಎರಡು ಘಂಟೆಗೆ ಅವನ ಪೋಲೀಸ ಠಾಣಾ ವ್ಯಾಪ್ತಿ ಬಿಟ್ಟು ಟೌನ್ ಪೋಲೀಸ ಠಾಣೆಗೆ ಹೋಗಿ ಅಲ್ಲಿ ಹಿರಿಯ ಪೋಲೀಸ ಅಧಿಕಾರಿಗಳ ಉಸ್ತುವಾರಿ ನೋಡಿಕೊಳ್ಳಲು ಹೋಗಿದ್ದನಂತೆ.ಅಲ್ಲಿ ಜನರು ಪ್ರಕರಣವಿಂದರ ಕುರಿತಂತೆ ಪೋಲೀಸ ಅಧಿಕಾರಿಗಳನ್ನ ಭೇಟಿ ಮಾಡಲು ಹೋದಾಗ ದರ್ಪ ಮೆರೆದಿದ್ದಾನೆ.ಇಂತಹ ಪೋಲೀಸ ಅಪ್ಪನ ಮೇಲೆ ದೂರು ದಾಖಲು ಮಾಡಲು ಜನ ಸಜ್ಜಾಗಿದ್ದಾರೆ.
ಇಂತಹ ಪೋಲೀಸಪ್ಪನ ಮೇಲೆ ದಕ್ಷ ಪೋಲೀಸ ಆಯುಕ್ತರು ಕ್ರಮ ಕ್ಯೆಕೊಳ್ಳತಾರಾ ಕಾದು ನೋಡಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ