ರೀಲ್ಸ್,ಗೀಲ್ಸ್ ಮಾಡುವ ಕಂಡಕ್ಟರ್,ಡ್ರೈವರ್ ಕೆಲಸ ಮಾಡಲು ಲಾಯಕ್ಕಲ್ಲ..ಸಚಿವ ರಾಮಲಿಂಗಾರೆಡ್ಡಿ ಗರಂ..
ಬೆಂಗಳೂರು:-KSRTC ಬಸ್ ಕಂಡಕ್ಟರ್ ಮತ್ತು ಡ್ರೈವರ್ ಕೆಲಸದ ವೇಳೆ ರೀಲ್ಸ್ ಮಾಡಿದರೆ. ಮುಲಾಜಿಲ್ಲದೆ ಅಮಾನತ್ತು ಮಾಡಿ ಮನೆಗೆ ಕಳಿಸಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚಿಗೆ ಚಾಲಕ ಮತ್ತು ನಿರ್ವಾಹಕರು ರೀಲ್ಸ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅಂತಹವರಿಗೆ ಖಡಕ್ ಸೂಚನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಕೆಲಸದ ಸಮಯದಲ್ಲಿ ರೀಲ್ಸ್ ಮಾಡುವವರು ಕೆಲಸಕ್ಕೆ ಲಾಯಕ್ಕಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ಸು ಚಕ್ಕಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಹಾಗೂ ಇಬ್ಬರು ರೈತರು ಗಾಯಗೊಂಡಿದ್ದರು.ಆ ಹಿನ್ನೆಲೆಯಲ್ಲಿ ಸಚಿವರು ಇಂದು ರೀಲ್ಸ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.