NPS ನೌಕರರ ಮಹತ್ವದ ಸಭೆ ಇಂದು ಸಿ.ಎಂ ಸಿದ್ದರಾಮಯ್ಯ ಜೊತೆ.

Share to all

NPS ನೌಕರರ ಮಹತ್ವದ ಸಭೆ ಇಂದು ಸಿ.ಎಂ ಸಿದ್ದರಾಮಯ್ಯ ಜೊತೆ.

ಬೆಂಗಳೂರು –

ಹಳೆ ಪಿಂಚಣಿ ಯೋಜನೆ ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ NPS ನೌಕರರು ಮತ್ತು ಸಂಘಟನೆಯ ಮುಖಂಡರು CM ಜೊತೆ ಮಹತ್ವದ ಸಭೆಯನ್ನು ನಡೆಸಿದರು.

ಹೌದು ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ಮಾಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕದ ಸರ್ಕಾರಿ ನೌಕರರು ಸಭೆ ಮಾಡಿ ಕೆಲ ವಿಚಾರ ಕುರಿತಂತೆ ಚರ್ಚೆಯನ್ನು ಮಾಡಿದರು.ಬೆಂಗಳೂರಿನಲ್ಲಿ ಸಿದ್ದರಾಮಯ್ಯನವ ಗೃಹ ಕಛೇರಿ “ಕೃಷ್ಣ” ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘಟನೆ ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಪದಾಧಿಕಾರಿಗಳೊಂದಿಗೆ ಸಚಿವಾಲಯದ ಪದಾಧಿಕಾರಿಗಳೊಂದಿಗೆ NPS ರದ್ಧತಿ ವಿಚಾರವಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.ಮುಖ್ಯಮಂತ್ರಿಗಳೊಂದಿಗೆ ಜರುಗಿದ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ(ರಿ.)ಬೆಂಗಳೂರು ರಾಜ್ಯಾಧ್ಯಕ್ಷರಾದ ಶಾಂತರಾಮ ತೇಜಾ ರವರ ನೇತೃತ್ವದಲ್ಲಿ ಸಚಿವಾಲಯದ ನೌಕರರ ಪ್ರತಿನಿಧಿಗಳು ಹಾಗೂ ಸಚಿವಾಲಯ ಕ್ಲಬ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ. ಗುರುಸ್ವಾಮಿರವರು, ಸಚಿವಾಲಯ ಕ್ಲಬ್ ನ ಗೌರವ ಕಾರ್ಯದರ್ಶಿಗಳಾದ ನಾಗಭೂಷಣ್ ರವರು ರವರು, ಸಚಿವಾಲಯದ ಪದಾಧಿಕಾರಿಗಳಾದ ಮಾರುತಿ.ಎಸ್.ಒಣವೆ ರವರು ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ನಾಗೇಶ್ ರವರು ಹಾಗೂ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಶಿವರುದ್ರಯ್ಯನವರು ಮತ್ತು ರಾಜ್ಯದ NPS ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಈ ಒಂದು ಸಭೆಯಲ್ಲಿ ಪಾಲ್ಗೊಂಡು NPS ರದ್ದತಿಯ ಕುರಿತಂತೆ ಚರ್ಚಿಸಿದರು. ಮುಖ್ಯಮಂತ್ರಿಗಳು OPS ಜಾರಿ ಮಾಡುವ ಕುರಿತು ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಆಯೋಜಿಸುವಂತೆ ತಿಳಿಸಿದರು ಶೀಘ್ರದಲ್ಲಿಯೇ ಸಮಾವೇಶದ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿ ಸದರಿ ಸಮಾವೇಶದಲ್ಲಿ NPS ನ್ನು ರದ್ದು ಗೊಳಿಸಿ OPS ನ್ನು ಜಾರಿಗೊಳಿಸುವ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ಮತ್ತು ಯಾವುದೇ ಅನುಮಾನವೇ ಬೇಡ ಎಂದು ಸಕಾರಾತ್ಮಕವಾಗಿ ಸಂದೇಶ ನೀಡಿದರು ರಾಜ್ಯ ಸರ್ಕಾರಿ ನೌಕರರಿಗೆ ನೀಡಿರುವ NPS ರದ್ಧತಿಯ ಭರವಸೆಯನ್ನು ಈಡೇರಿಸುವುದಾಗಿ ತಿಳಿಸಿದರು ಈ ಮೂಲಕ ರಾಜ್ಯದ ಸಮಸ್ತ ಕರ್ನಾಟಕದ NPS ನೌಕರರ ಜೀವನದ ಭದ್ರತೆಗೆ ನ್ಯಾಯವನ್ನು ಒದಗಿಸಲಾಗುವುದು ಎಂದು ಈ ಸಭೆಯಲ್ಲಿ ತಿಳಿಸಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ನೌಕರರ ಸಂಘಟನೆಯ ನಾಯಕರು ಕರ್ನಾಟಕ ರಾಜ್ಯ NPS ನೌಕರರ ಸಂಘದ ಹೋರಾಟಕ್ಕೆ ಜಯವಾಗಲಿ ಎನ್ನುತ್ತಾ ತೆರಳಿದರು ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎಂಬ ಮಾತಿಗೆ ಇವತ್ತಿನ ಮುಖ್ಯಮಂತ್ರಿಯವರೊಂದಿಗೆ ಸಭೆ ಒಂದಿಷ್ಟು ಸಂತೋಷವನ್ನುಂಟು ಮಾಡಿತು.

ಉದಯ ವಾರ್ತೆ ಬೆಂಗಳೂರು


Share to all

You May Also Like

More From Author