ಎಷ್ಟೇ ರೇಡ್ ಮಾಡಿದರೂ ನಿಲ್ಲುತ್ತಿಲ್ಲಾ ಗಾಂಜಾ ಘಾಟು..ಹುಬ್ಬಳ್ಳಿಯ ಮಂಟೂರ ರಸ್ತೆ ಕಡೆ ಒಮ್ಮೆ ಹೋದರೆ ನಿಮಗೂ ಬರುತ್ತೆ ಗಾಂಜಾ ವಾಸನೆ..ಆದರೆ ಕೆಲವರಿಗೆ ಯಾಕೆ ಬರತಿಲ್ಲಾ ಗಾಂಜಾ ಘಾಟು..
ಹುಬ್ಬಳ್ಳಿ:-ಹೌದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೊಸ ಕಮೀಷನರ್ ಚಾಜ್೯ ತೆಗೆದುಕೊಂಡಿದ್ದೇ ತಡ ಗಾಂಜಾಗಳ ರೇಡ್ ಮಾಡಿದ್ದೇ ಮಾಡಿದ್ದು..ಆದರೂ ಸಹ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ನಿಲ್ಲತಾ ಇಲ್ಲಾ.ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಅದೊಂದು ಪ್ಲ್ತಾಟ್ ಬಳಿ ವ್ಯಕ್ತಿಯೊಬ್ಬ ರಾಜಾ ರೋಷವಾಗಿ ಗಾಂಜಾ ವಾಸನೆ ಹರಡುತ್ತಿದ್ದಾನೆ.ಆ ವ್ತಕ್ತಿಯನ್ನ ಬೆಂಡಿಗೇರಿ ಪೋಲೀಸರು ಒಂದೀಟು ಪೋಲೀಸ ವಾಸನೆ ಬಡಿಸಬೇಕಾಗಿದೆ.
ಸದ್ಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ, ಮಟ್ಕಾ,ಜೂಜಾಟ ಕಣ್ಮರೆಯಾಗಿದ್ದು ಎಲೆ ಮರೆಯ ಕಾಯಂತೆ ಇವನೊಬ್ಬ ಗಾಂಜಾ ಘಾಟು ಹರಡಲು ಆರಂಭಿಸಿದ್ದಾನೆ.ಇವನೇನು ಬಿಡಿ ಅಂತಾ ಬಿಟ್ಟರೆ ಅದೇ ನಾಳೆ ದೊಡ್ಡ ಮರವಾಗಿ ಬೆಳೆಯಬಹುದು.