ಮಾಟ ಮಂತ್ರಕ್ಕೆ ಬಲಿಯಾದ ದೇವಸ್ಥಾನದ ಅರ್ಚಕ ದೇವೆಂದ್ರಪ್ಪ ಆರೆಸ್ಟ್. ಉದಯ ವಾರ್ತೆ ಮುಂದೆ ಕೊಲೆಯ ರಹಸ್ಯ ಬಿಚ್ಚಿಟ್ಟ ಕೊಲೆ ಪಾತಕಿ ಸಂತೋಷ
ಹುಬ್ಬಳ್ಳಿ –
ಹೌದು ಎರಡು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದ ವೈಷ್ಟೋದೇವಿ ದೇವಸ್ಥಾನದ ಅರ್ಚಕ ದೇವೆಂದ್ರಪ್ಪ ನ ಕೊಲೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.ಕೊಲೆ ನಡೆದು 24 ಗಂಟೆ ಕಳೆದ ನಂತರ ಹತ್ಯೆ ಮಾಡಿದ ಆರೋಪಿಯ ಪೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಈ ಒಂದು ಪೊಟೊ ಬಿಡುಗಡೆಯ ಬೆನ್ನಲ್ಲೇ ಮಾಹಿತಿ ಸಿಗುತ್ತಿದ್ದಂತೆ ಖಾಸಗಿ ವಾಹಿನಿಯೊಂದರ ಕ್ಯಾಮೆರಾ ಮೆನ್ ಮಹೇಶ್ ಆರೋಪಿಯನ್ನು ನೋಡಿದ್ದಾರೆ.ನಂತರ ಕೂಡಲೇ ಒಂದಿಷ್ಟು ಮಾಹಿತಿಯನ್ನು ಆರೋಪಿಯಿಂದ ಕೇಳಿದಾಗ ಕೊಲೆ ಮಾಡಿರುವ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ಈ ಒಂದು ಮಾಹಿತಿ ಬರುತ್ತಿದ್ದಂತೆ ಮತ್ತಷ್ಟು ಮಾತನಾಡಿಸಿದಾಗ ಕೊಲೆ ಯಾತಕ್ಕಾಗಿ ಮಾಡಲಾಗಿದೆ ಕಾರಣ ಏನು ಈ ಎಲ್ಲಾ ಮಾಹಿತಿಯನ್ನು ಹೇಳಿಕೊಂಡಿದ್ದಾನೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಮಧ್ಯರಾತ್ರಿ ಆಗಮಿಸಿದ ಡಿಸಿಪಿ ಮಹಾನಿಂಗ ನಂದಗಾವಿ ಆರೋಪಿಯನ್ನು ಲಾಕ್ ಮಾಡಿ ಕರೆದುಕೊಂಡು ಹೋಗಿದ್ದಾರೆ.
ಇನ್ನೂ ಇದೇ ವೇಳೆ ಉದಯ ವಾರ್ತೆಯೊಂದಿಗೆ ಆರೋಪಿ ಸಂತೋಷ ಮಾತನಾಡಿ ಕೌಟುಂಬಿಕ ಸಮಸ್ಯೆ ಇದೆ ಎಂದುಕೊಂಡು ಅರ್ಚಕನ ಬಳಿ ಹೋಗಿದ್ದೇವು ಈ ಹಿಂದೆ ಹೋಗಿದ್ದ ಸಮಯದಲ್ಲಿ ಸಮಸ್ಯೆ ಪರಿಹಾರ ಮಾಡುವ ಬದಲಿಗೆ ನಮ್ಮ ಕುಟುಂಬದಲ್ಲಿ ಮತ್ತಷ್ಟು ಸಮಸ್ಯೆಯನ್ನು ತಂದಿಟ್ಟಿದ್ದನು ಅಲ್ಲದೇ ಎಲ್ಲವನ್ನೂ ಹಾಳು ಮಾಡಿ ಬೇರೆ ಬೇರೆ ಮಾಡಿದ್ದು ಇದಕ್ಕೆ ಮಾಟ ಮಂತ್ರವೇ ಕಾರಣವಾಗಿದ್ದು ಹೀಗಾಗಿ ಬೇಸತ್ತು ನಾನು ಅರ್ಚಕನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.
ಸಧ್ಯ ಇವನನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.ಇನ್ನೂ ಕೊಲೆ ಪ್ರಕರಣ ಕುರಿತಂತೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿರುವ ಹುಬ್ಬಳ್ಳಿಯ ಪವರ್ ಟಿವಿ ಕಾರ್ಯಕ್ಕೆ ಪೊಲೀಸರು ಮೆಚ್ಟುಗೆಯನ್ನು ವ್ಯಕ್ತಪಡಿಸಿದ್ದಾರೆ.