ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರ ಕಾರ್ಯಾಚರಣೆ. ಅಫೀಮು ಮತ್ತು ಅಫೀಮು ಗಿಡದ ಪಾವಡರ ಮಾರಾಟ ಮಾಡುತ್ತಿದ್ದ ಐದು ಪೆಡ್ಲರ್‌ಗಳ ಬಂಧನ.
ಹುಬ್ಬಳ್ಳಿ:-ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರ ಕಾರ್ಯಾಚರಣೆ ನಡೆಸಿ
ಅಫೀಮು ಮತ್ತು ಅಫೀಮು ಗಿಡದ ಪಾವಡರ ಮಾರಾಟ ಮಾಡುತ್ತಿದ್ದ ಐದು ಪೆಡ್ಲರ್‌ಗಳ ಬಂಧಿಸಿದ್ದಾರೆ ಬಂಧಿತರಿಂದ 150 ಗ್ರಾಂ ಅಫೀಮ್ ಮತ್ತು 3 ಕೆಜಿ ಅಫೀಮ್ ಗಿಡದ ಪಾವಡರ್ ವಶಕ್ಕೆ ಪಡೆದಿದ್ದಾರೆ.
ರಾಜಸ್ತಾನದಿಂದ ಬಂದು ಹುಬ್ಬಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳು.ಇವರಾಗಿದ್ದು.
ರಾಜಸ್ತಾನದ ಮೂಲದ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಪೆಡ್ಲರ್‌ಗಳು ಎನ್ನಲಾಗಿದೆ.
ಹುಬ್ಬಳ್ಳಿಯ ಗಬ್ಬೂರ ಬಳಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು.
ಜುಗತರಾಮ್ ಪಟೇಲ್, ಹೀಮಾ ಬಿಶ್ನೋಯ್, ದನರಾಯ್ ಪಟೇಲ್, ಶ್ರವಣಕುಮಾರ ಬಿಶ್ನೋಯ್, ಓಂ ಪ್ರಕಾಶ ಬಿಶ್ನೋಯ್ ಎಂಬುವರನ್ನು ಬಂಧಿಸಿದ್ದಾರೆ.