ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಕೇಂದ್ರ ಬಜೆಟ್ ಮಂಡನೆ ಆಗುತ್ತಿದೆ. ಏಳನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಪ್ರವೇಶಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಟ್ಟರು. ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ತಮ್ಮ ಏಳನೇ ಬಜೆಟ್ ಮಂಡನೆಗೂ ಮುನ್ನ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು, ಬಜೆಟ್‌ಗೂ ಮುನ್ನವೇ ಅವರ ಬಜೆಟ್ ಲುಕ್ ರಿವೀಲ್ ಆಗಿದೆ. ತಮ್ಮ ಏಳನೇ ಬಜೆಟ್‌ಗಾಗಿ, ಹಣಕಾಸು ಸಚಿವರು ಬಿಳಿ ಮತ್ತು ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ತಮ್ಮ ಏಳನೇ ಬಜೆಟ್‌ಗಾಗಿ, ಹಣಕಾಸು ಸಚಿವರು ಬಿಳಿ ಮತ್ತು ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ಈ ಪ್ರಮುಖ ಸಂದರ್ಭಕ್ಕಾಗಿ ಆರು ಗಜಗಳ ಸೀರೆಯಲ್ಲಿ ಕಂಡರು. ವಿಶಿಷ್ಟವಾದ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದಾರೆ. ಅವರ ಸೀರೆಯ ಬಣ್ಣ ಬಿಳಿ ಮತ್ತು ಗಾಢ ಗುಲಾಬಿಯಿಂದ ಕೂಡಿದೆ. ಗುಲಾಬಿ ಮತ್ತು ಬಿಳಿ ಬಣ್ಣದ ಸೀರೆಯು ಆಕರ್ಷಣೀಯವಾಗಿದೆ. ಇದು ಭಾರತೀಯ ಕರಕುಶಲತೆಯ ಶ್ರೀಮಂತ ಕಲಾತ್ಮಕತೆಯನ್ನು ಎತ್ತಿ ತೋರಿಸುತ್ತದೆ. ಗುಲಾಬಿ ಬ್ಲೌಸ್ ಕೂಡ ಚೆಂದವಾಗಿ ಕಂಡಿತ್ತು.
ಚಿನ್ನದ ಬಳೆಗಳೊಂದಿಗೆ ಚೈನ್ ಪೆಂಡೆಂಟ್ ಮತ್ತು ಸ್ಟಡ್ ಕಿವಿಯೋಲೆಗಳೊಂದಿಗೆ ಚೆಂದವಾಗಿ ಕಂಡಿದ್ದಾರೆ. ಅವರು 2024ರ ಮಧ್ಯಂತರ ಬಜೆಟ್ ದಿನ ನೀಲಿ ಕೈಮಗ್ಗದ ಸೀರೆಯನ್ನು ಧರಿಸಿದ್ದರು. ನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯ ಸಂಕೇತವಾಗಿದೆ. ನಿರ್ಮಲಾ ಸೀತಾರಾಮನ್ ಅವರು 2023ರ ಬಜೆಟ್ ಮಂಡನೆ ದಿನ ಕೆಂಪು ಬಣ್ಣದ ಸೀರೆಯನ್ನು ಆಯ್ಕೆ ಮಾಡಿದ್ದರು. ಸಾಂಪ್ರದಾಯಿಕ ಕೆಂಪು ಬಣ್ಣವನ್ನು ಪ್ರೀತಿ, ಶಕ್ತಿ, ಶೌರ್ಯ ಮತ್ತು ಬದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಜೆಟ್ ಮಂಡನೆಗೂ ಕರ್ನಾಟಕಕ್ಕೂ ವಿಶೇಷವಾದ ನಂಟಿತ್ತು. ಏನೆಂದರೆ, ನಿರ್ಮಾಲಾ ಅವರು ಧರಿಸಿದ್ದ, ಕೈಯಿಂದ ನೇಯ್ದ ಇಳಕಲ್ ಸೀರೆ ಕರ್ನಾಟಕದ್ದು. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಈ ಸೀರೆ ಮೇಲೆ ಚಿತ್ತಾರಗೊಂಡಿದ್ದ ಕಸೂತಿಯನ್ನು ಧಾರವಾಡದಲ್ಲಿ ಮಾಡಲಾಗಿತ್ತು. ನಿರ್ಮಲಾ ಅವರು ಧರಿಸಿದ್ದ ಸೀರೆಯ ಮೇಲೆ ರಥ, ನವಿಲು ಮತ್ತು ಕಮಲಗಳು ಸಾಂಪ್ರದಾಯಿಕ ಕಸೂತಿಯ ಮೂಲಕ ಚಿತ್ತಾರ ಬಿಡಿಸಲಾಗಿತ್ತು. ಧಾರವಾಡದ ಆರತಿ ಕ್ರಾಫ್ಟ್‌ನ ಆರತಿ ಹಿರೇಮಠ್ ಅವರು ಈ ಕಸೂತಿಯ ಹಿಂದಿನ ಕಲಾವಿದೆ. ಈ ಸೀರೆಯನ್ನು ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಗಿಫ್ಟ್ ನೀಡಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.