ರಾಮನಗರ: ನಗರದ ಮಾಗಡಿ ಪಟ್ಟಣದಲ್ಲಿ ಐಸ್‌ಕ್ರೀಮ್ ಕೊಡಿಸುವ ನೆಪದಲ್ಲಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಕಾಮುಕನೊಬ್ಬ ಅತ್ಯಾಚಾರವೇಸಗಿ ಬಳಿಕ ಕೊಂದು ಹೇಯ ಕೃತ್ಯ ನಡೆದಿದೆ. ಈ ಪೈಶಾಚಿಕ ಕೃತ್ಯ ಗೌರಿಪಾಳ್ಯದ ನಿವಾಸಿ ಇಮ್ರಾನ್ ಖಾನ್ ಎಂಬಾತನಿಂದ ನಡೆದಿದೆ. ಕಳೆದ ಸೋಮವಾರ ಮಾಗಡಿ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಇಮ್ರಾನ್ ಖಾನ್, ಬಾಲಕಿ ಮೇಲೆ ಕಣ್ಣಾಕಿದ್ದ. ಐಸ್ ಕ್ರೀಂ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿದ್ದ. ಬಳಿಕ ಅತ್ಯಾಚಾರ ಎಸಗಿ ವಿಷ ಯಾರಿಗೂ ತಿಳಿಯಬಾರೆಂದು ಕೊಂದು ಹಾಕಿ, ಕಾಲ್ಕಿತ್ತಿದ್ದ.
ತಿಪ್ಪಗೊಂಡನಹಳ್ಳಿ ತಪ್ಪಲಿನಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿತ್ತು. ಕಲಾಸಿಪಾಳ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಇಮ್ರಾನ್ ಖಾನ್‌ನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಪೋಷಕರು ಆದಷ್ಟು ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅಪರಿಚಿತರೇ ಆಗಲಿ ಪರಿಚಿತರೇ ಆಗಲಿ ಸ್ವಲ್ಪ ನಿಗಾ ವಹಿಸಿ.