ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕೆಎಂಎಪ್- 24 ನಲ್ಲಿ ನಡೀತಾ ಗೋಲ್ ಮಾಲ್.ಈ ಸ್ಕೀಮ್ ನಲ್ಲಿ ಪಾಲಿಕೆಯ ಅಧಿಕಾರಿಯೊಬ್ಬರು ಪಾಲಿದಾರರಾದರಾ.? ಪಾಲಿಕೆಯಲ್ಲಿ ಎಲ್ಲವೂ ಆನಂದಮಯ..
ಹುಬ್ಬಳ್ಳಿ:- ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ನೊಂದಣಿ ಸಂಖ್ಯೆ ಹಾಗೂ ಸರ್ವೇಮಾಡಿ(ಕೆಎಂಎಪ್ -24) ನಾಮ ಪಲಕ ಹಾಕುವ ಯೋಜನೆಯಲ್ಲಿ ನಡೀತಾ ಭಾರೀ ಗೋಲ್ ಮಾಲ್ ಹೀಗೊಂದು ಚರ್ಚೆ ಪಾಲಿಕೆಯ ಸದಸ್ಯರಲ್ಲಿಯೇ ನಡೆದಿದೆ.
ಮೊದಲಿಗೆ ಪೈಲ್ ಮೂ ಆಗಲು ಮೂರು ಕೆಜಿ ಪೇಡಾ ತಿಂದು ಮತ್ತೆ ಕಾರ್ಯಾದೇಶ ನೀಡುವಾಗ 2.5 ಕೆಜಿ ಪೇಡಾ ತಿಂದವರಿಗೆ ಕಮೀಷನರ್ ನೀರು ಕುಡಿಸಬೇಕಾಗಿದೆ.
ಏನಿದು ಯೋಜನೆ..
21-01-2023 ರಂದು ಗದಗ ಮೂಲದ ನಿರ್ಧೇಶಕರು ಶ್ರೀ ಪುಟ್ಟರಾಜ್ ಐಟಿ ಸರ್ವಿಸ್ ಎಂಬುವರು ಪಾಲಿಕೆಯ ವ್ಯಾಪ್ತಿಯ ಮನೆಗಳ ಸರ್ವೇ ಮಾಡಿ ಅಂತಹ ಮನೆಗಳಿಗೆ ಪಿಆಯ್ ಡಿ ನಂಬರಿನ ನಾಮ ಪಲಕ ಹಾಕುವ ಯೋಜನೆಗೆ ಸರಕಾರದಿಂದ ಆದೇಶ ಮಾಡಿದ ಪ್ರತಿಯೊಂದಿಗೆ ಮನವಿ ಸಲ್ಲಿಸಿತು.
ಪುಟ್ಟರಾಜ್ ಐಟಿ ಸರ್ವಿಸ್ ಮನವಿ ಕೊಟ್ಟ ಒಂದೇ ತಿಂಗಳಲ್ಲಿ ಅಂದರೆ 28-02-2023 ರ ಸಾಮಾನ್ಯ ಸಭೆಯಲ್ಲಿ ತರಾತುರಿಯಲ್ಲಿ ಠರಾವು ಪಾಸ್ ಮಾಡಿತು. (ಠರಾವು ಸಂಖ್ಯೆ 262) ಠರಾವು ಪಾಸ್ ಆದ ಮೇಲೆ 26-06-2023 ರಂದು ಪಾಲಿಕೆಯಿಂದ ಕಾರ್ಯಾದೇಶ ನೀಡಲಾಯಿತು.
ಕಾರ್ಯಾದೇಶ ನೀಡುವಾಗ ಮಹಾನಗರ ಪಾಲಿಕೆ ಹತ್ತು ನಿಯಮಗಳನ್ನು ಹಾಕಿ ಕಾರ್ಯಾದೇಶ ನೀಡಿದ ದಿನಾಂಕದಿಂದ 280 ದಿನದೊಳಗಾಗಿ ಕೆಲಸ ಮುಗಿಸಬೇಕು ಎಂಬ ಷರತ್ತಿನೊಂದಿಗೆ ಕಾರ್ಯಾದೇಶ ನೀಡಿದೆ.ಈ ಕಾರ್ಯಾದೇಶದ ನಂತರ ಅವರು ಮಾಡಿದ್ದು ಏನೋ ಗೊತ್ತಿಲ್ಲಾ.ಆದರೆ ಈಗಾಗಲೇ ಇವರಿಗೆ 44 ಲಕ್ಷ 5612 ರೂ ಹಣ ಸಂದಾಯವಾಗಿದೆ.ಮತ್ತೊಂದ 84 ಲಕ್ಷದ ಬಿಲ್ಲ ಈಗಾಗಲೇ ರೆಡಿ ಆಗಿದೆ ಅಂತೆ.
ಇದೆಲ್ಲ ಇರಲಿ ಆದರೆ ಈ ಸ್ಕೀಮ್ ನಲ್ಲಿ ಬಾರೀ ಗೋಲ್ ಮಾಲ್ ಆಗಿದೆ ಎನ್ನಲಾಗಿದೆ.3 ಕೆಜಿ, 2.5 ಕೆಜಿ ಪೇಡಾ ತಂದು ಕೊಟ್ಟ ಆ ಗದಗ ಬಿಜೆಪಿ ನಾಯಕನೇ ಬಾಯಿ ಬಿಟ್ಟಿದ್ದಾನೆ.ಇದೆಲ್ಲವನ್ನೂ ಆಯುಕ್ತರು ಈ ಸ್ಕೀಂನ ಸಮಗ್ರ ತನಿಖೆಗೆ ಆದೇಶ ಮಾಡತಾರಾ ಕಾದು ನೋಡಬೇಕಾಗಿದೆ.