ಅರ್ಚಕ ದೇವಪ್ಪಜ್ಜ ಕೊಲೆ ಪ್ರಕರಣ..ಕೊಲೆ ಪ್ರಕರಣ ಬೇಧಿಸುವಲ್ಲಿ ಪವರ್ ಟಿವಿ ವಿಡಿಯೋ ಜರ್ನಲಿಸ್ಟ್ ಮಹೇಶ ಭೋಜಗಾರ ಪ್ರಮುಖ ಪಾತ್ರ.ಪೋಲೀಸ ಕಮೀಷನರಿಂದ ಕ್ಯಾಮರಾ ಮೆನ್ ಮತ್ತು ವರದಿಗಾರರಿಗೆ ಶ್ಲಾಘನೆ..
ಹುಬ್ಬಳ್ಳಿ:- ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದ ವೈಷ್ಣೋದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪನ ಕೊಲೆ ಮಾಡಿದ್ದ ಆರೋಪಿಯನ್ನು ಹಿಡಿಯುವಲ್ಲಿ ಸಹಾಯ ಮಾಡಿದ ಪವರ್ ಟಿವಿ ವರದಿಗಾರ ರವಿಕುಮಾರ ಉಳ್ಳಾಗಡ್ಡಿ ಹಾಗೂ ಕ್ಯಾಮೆರಾ ಮೆನ್ ಮಹೇಶ ಬೋಜಗಾರ ಅವರನ್ನು ಪೋಲೀಸ ಕಮೀಷನರ್ ಸನ್ಮಾನಿಸಿ ಬಹುಮಾನ ನೀಡಿದ್ದಾರೆ.