ಬೆಂಗಳೂರು: ನಮ್ಮ ಕ್ಷೇತ್ರದ ಹುಡುಗರು ಬಾಸ್, ಬಾಸ್ ಅಂತ ಗಲಾಟೆ ಮಾಡಿ ಕೂಗಿದ್ರು. ಯಾವ ಬಾಸ್ ನಂಗೆ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ದರ್ಶನ್ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ನಿನ್ನೆ ನಮ್ಮ ಕ್ಷೇತ್ರದ ಹುಡುಗರು ಬಾಸ್, ಬಾಸ್ ಅಂತ ಗಲಾಟೆ ಮಾಡಿ ಕೂಗಿದ್ರು. ಯಾವ ಬಾಸ್ ನಂಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಏನು ಬರ್ತಿದೆ ಎಂದು ನೋಡಲು ನನಗೆ ಸಮಯವಿಲ್ಲ. ಒಂದೊಂದು ಟಿವಿಯಲ್ಲಿ ಒಂದೊಂದು ಬರ್ತಿದೆ. ನಾನು ಗೃಹ ಸಚಿವನೂ ಅಲ್ಲ. ಪೊಲೀಸ್ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನೂ ನಿನ್ನೆಯೇ ನನ್ನ ಭೇಟಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬಂದಿದ್ದರು. ಆದರೆ ನಾನು ಭೇಟಿ ಮಾಡಲು ಒಪ್ಪಲಿಲ್ಲ. ಇಂದು ಬೆಳಗ್ಗೆ ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ, ಈ ಹಿಂದೆ ದರ್ಶನ್ ಅವರ ಮಗನಿಗೆ ನನ್ನ ಸ್ಕೂಲ್ನಲ್ಲಿ ಸೀಟ್ ಕೊಟ್ಟಿದ್ದೆ. ಈಗ ಮತ್ತೆ ನಮ್ಮ ಸ್ಕೂಲ್ನಲ್ಲಿ ಸೇರಿಸಿಕೊಡಿ ಎಂದು ಮನವಿ ಮಾಡಲು ಬಂದಿದ್ದರು.
ನಮ್ಮ ಪ್ರಿನ್ಸಿಪಾಲ್ಗೆ ಹೇಳ್ತೀನಿ ಎಂದು ಹೇಳಿದ್ದೇನೆ. ಮಗನ ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದೆ. ನಮ್ಮ ಸ್ಕೂಲ್ನಲ್ಲಿ ಮಕ್ಕಳ ವರ್ತನೆ ಬಗ್ಗೆ ಪೇರೆಂಟ್ಸ್ ಗಮನಕ್ಕೆ ತರುತ್ತೇವೆ. ಹಾಗೆ ಹಿಂದೆ ದರ್ಶನ್ ಅವರನ್ನು ಕರೆಸಿದ್ದಾರೆ. ಮನೆ ಎದುರಿನ ಶಾಲೆಗೆ ಹೋದ್ರೆ ಹೋಗ್ತಾ ಬರ್ತಾ ಇರಬಹುದು ಎಂದು ಕೇಳಿದ್ದಾರೆ. ಮಕ್ಕಳ ವಿಚಾರ ದೊಡ್ಡದು. ಮಗುಗೆ ಸಹಾಯ ಮಾಡ್ತೀನಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.