ಚಿಕ್ಕಬಳ್ಳಾಪುರ: ಆತ ಸಂಬಂಧದಲ್ಲಿ ಒಂದು ರೀತಿ ಸ್ವಂತ ಮಗನೇ ಒಂದೇ ರಕ್ತ ಹರಿಯುತ್ತಿದ್ದ ಆತನ ಮೇಲೆ ಚಿಕ್ಕಪ್ಪನಿಗೆ ಅದೇನು ಸಿಟ್ಟಿತ್ತೋ ಪಿಸ್ತೂಲಿನಿಂದ ಗುಂಡು ಹಾರಿಸಿ ಬರ್ಬರವಾಗಿ ಕೊಂದೇ ಬಿಟ್ಟಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ, ಯಾರು, ಹೇಗೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಹೌದು, ಮಗನ ಸಮನಾದ ಸ್ವಂತ ಅಣ್ಣನ ಮಗನನ್ನೇ ಪಿಸ್ತೂಲ್ನಿಂದ ಗುಂಡು ಹಾರಿಸಿ ಚಿಕ್ಕಪ್ಪ ಕೊಂದಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಘಟನೆ ಜರುಗಿದೆ. ನಜೀರ್ ಅಹ್ಮದ್ ಕೊಲೆಯಾದ ದುರ್ದೈವಿ ಆಗಿದ್ದು, 66 ವರ್ಷದ ಬಶೀರ್ ಅಹ್ಮದ್ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಅಣ್ಣ ಮಾಬೂಸಾಬಿ ಮೇಲೂ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಾಬೂಸಾಬಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಬಶೀರ್ ಅಹ್ಮದ್ ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಊರಿಗೆ ಬಂದಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಶೀರ್ ಅಹ್ಮದ್ನನ್ನು ವಶಕ್ಕೆ ಪಡೆದಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ. ಒಟ್ನಲ್ಲಿ ಮಗನ ಸಮನಾದ ಆತನನ್ನು ಚಿಕ್ಕಪ್ಪನೆ ಕೊಂದಿದ್ದು ಮಾತ್ರ ದುರ್ದೈವ.