ಸಾಗರ:- ಎರಡೂವರೆ ವರ್ಷ ಪ್ರೀತಿಸಿದ ಯುವತಿ ಮದುವೆ ಆಗು ಅಂದಿದ್ದಕ್ಕೆ ಕತ್ತು ಹಿಸುಕಿ ಮಣ್ಣಿನಲ್ಲಿ ಹೂತು ಹಾಕಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೃಜನ್ ಹಾಗೂ ಸೌಮ್ಯ ಎಂಬ ಇಬ್ಬರೂ ಎರಡೂವರೆ ವರ್ಷಗಳಿಂದ ಪರಸ್ಪರ ಲವ್ ಮಾಡುತ್ತಿದ್ದರು.ಸೃಜನ್ ಪೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗಾಗ ಹಣ ವಸೂಲಿಗೆ ಕೊಪ್ಪ ಗ್ರಾಮಕ್ಕೆ ಹೋಗುತ್ತಿದ್ದಾಗ ನರ್ಸಿಂಗ್ ಓದುತ್ತಿದ್ದ ಸೌಮ್ಯ ಪರಿಚಯವಾಗಿ ಪ್ರೀತಿಯ ಬಲೆಗೆ ಬಿದ್ದಿದ್ದರು.
ಇಬ್ಬರೂ ಬೇರೆ ಬೇರೆ ಸಮುದಾಯದವರಾಗಿದ್ದರಿಂದ ಮದುವೆಗೆ ಜಾತಿ ಅಡ್ಡ ಬಂದಿದೆ. ಸೃಜನ್ ಮನೆಯಲ್ಲಿ ಆ ಯುವತಿ ಮದುವೆ ಬೇಡಾ ಅಂದಿದ್ದರಂತೆ.ಅದಕ್ಕೆ ಹುಡುಗ ಹುಡುಗಿಗೆ ಮದುವೆ ಈಗ ಸದ್ಯ ಬೇಡಾ ಅಂದಿದ್ದನು.ಆದರೆ ಮೃತ ಸೌಮ್ಯ ಪ್ರೀತಿಸಿದ್ದಿಯಾ ಮದುವೆ ಆಗು ಅಂದಿರುವ ಕಾರಣನೇ ಈ ಕೊಲೆಗೆ ಕಾರಣ ಆಯಿತು ಎನ್ನಲಾಗಿದೆ.
ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ.ಸೃಜನ್ ಆಕೆಯ ಮೇಲೆ ಹಲ್ಲೆ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿ ತನ್ನದೇ ಕಾರಿನಲ್ಲಿ ಶವ ಇಟ್ಟುಕೊಂಡು ಯಾರೂ ಇಲ್ಲದ ಪ್ರದೇಶದಲ್ಲಿ ತಗ್ಗು ತೆಗೆದು ಹೂತು ಹಾಕಿ ಬಂದಿದ್ದಾನೆ.ಪ್ರಕರಣ ಬೆಳಕಿಗೆ ಬರುತ್ತಿದ್ದ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಹೂತು ಹಾಕಿರುವ ಶವವನ್ನು ಹೊರ ತೆಗೆಯಲು ಕಾನೂನು ತೊಡಕುಗಳಿದ್ದು ಇಂದು ಶವ ಹೊರತೆಗೆಯುವ ಸಾದ್ಯತೆ ಇದ್ದು ನಂತರ ಪೋಲೀಸರು ತನಿಖೆ ಕೈಕೊಳ್ಳಲಿದ್ದಾರೆ.