ಬೆಂಗಳೂರು:- ಪಬ್ ಗೆ ಬಂದಿದ್ದ ಗ್ರಾಹಕರ ಮೇಲೆ ಬೌನ್ಸರ್ ಗಳಿಂದ ಹಲ್ಲೆ ನಡೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಅಶೋಕನಗರದಲ್ಲಿರುವ ಆರ್ಬರ್ ಬ್ರೀವಿಂಗ್ ಪಬ್ನಲ್ಲಿ ಜರುಗಿದೆ ಕುಡಿದ ಅಮಲಿನಲ್ಲಿ ಗ್ರಾಹಕರ ಮೇಲೆ ನಡೆದಿರುವ ಹಲ್ಲೆ ಇದಾಗಿದೆ. ಆರ್ಬರ್ ಬ್ರೀವಿಂಗ್ ಪಬ್ನಲ್ಲಿ ಗಲಾಟೆ ನಡೆದಿದ್ದು, ಆರ್ಬರ್ ಬ್ರೀವಿಂಗ್ ಪಬ್ಗೆ ಹೋಗಿದ್ದ ಸ್ನೇಹಿತರು, ತಡರಾತ್ರಿವರೆಗೂ ಪಬ್ನಲ್ಲಿ ಮದ್ಯ ಸೇವನೆ ಮಾಡಿದ್ದು ಕುಡಿದ ಅಮಲಿನಲ್ಲಿ ಬೌನ್ಸರ್ಗಳ ಜತೆ ಗಲಾಟೆ ಮಾಡಿಕೊಂಡಿದ್ದಾರೆ.
ಈ ವೇಳೆ 6-8 ಜನ ಬೌನ್ಸರ್ಗಳು ರಾಡ್, ಹೆಲ್ಮೆಟ್ನಿಂದ ಹಲ್ಲೆ ಮಾಡಿದ್ದಾರೆ. ಗಲಾಟೆ ಆಗುವಾಗಲೇ ಸ್ಥಳಕ್ಕೆ ಆಶೋಕನಗರ ಪೊಲೀಸರು ಆಗಮಿಸಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಲಾಟೆ ವೇಳೆ ಹಲ್ಲೆಗೊಳಗಾದ ಓರ್ವ ವ್ಯಕ್ತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆಯ ವಿಡಿಯೋ ಪೊಲೀಸ್ ಆಯುಕ್ತರಿಗೆ ಟ್ಯಾಕ್ ಮಾಡಿ ದೂರು ನೀಡಲಾಗಿದೆ. ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.