ಸಿಂಗಾಪುರದ ಪಾಸ್ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿ:ಭಾರತಕ್ಕೆ ಎಷ್ಟನೇ ಸ್ಥಾನ?

Share to all

ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್​ಪೋರ್ಟ್​ ಹೊಂದಿರುವ ರಾಷ್ಟ್ರ ಸಿಂಗಾಪುರವಾಗಿದೆ. ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಟ್ 2024 ರ ಅನ್ವಯ ಜಗತ್ತಿನಾದ್ಯಂತ 227 ಪ್ರವಾಸಿ ತಾಣಗಳ ಪೈಕಿ 192ಕ್ಕೆ ವೀಸಾಮುಕ್ತ ಪ್ರವೇಶವನ್ನು ಸಿಂಗಾಪುರ ಪಾಸ್ ಫೋರ್ಟ್ ಹೊಂದಿದೆ ಎನ್ನಲಾಗಿದೆ.

ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್​ನಲ್ಲಿ ಭಾರತ 82ನೇ ಸ್ಥಾನ ಪಡೆದಿದೆ. ಭಾರತದ ನಾಗರಿಕರು 58 ದೇಶಗಳಿಗೆ ವೀಸಾರಹಿತವಾಗಿ ಪ್ರಯಾಣಿಸಬಹುದು. 195 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಪಡೆಯುವ ಮೂಲಕ ಸಿಂಗಾಪುರ ಮತ್ತೊಮ್ಮೆ ದಾಖಲೆಯ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಜರ್ಮನಿ, ಇಟಲಿ, ಜಪಾನ್, ಫ್ರಾನ್ಸ್ ಮತ್ತು ಸ್ಪೇನ್ ಕ್ರಮವಾಗಿ 192 ದೇಶಗಳಿಗೆ ಪ್ರವೇಶ ನೀಡುವ ಮೂಲಕ ಎರಡನೇ ಸ್ಥಾನದಲ್ಲಿವೆ.

ಆಸ್ಟ್ರಿಯಾ, ಫಿನ್ಲ್ಯಾಂಡ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ಮೂರನೇ ಸ್ಥಾನದಲ್ಲಿವೆ. 190 ದೇಶಗಳ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ಬೆಲ್ಜಿಯಂ, ಡೆನ್ಮಾರ್ಕ್, ನ್ಯೂಜಿಲೆಂಡ್, ನಾರ್ವೆ ಮತ್ತು ಸ್ವಿಟ್ಜರ್ಲೆಂಡ್​ನೊಂದಿಗೆ ಯುನೈಟೆಡ್ ಕಿಂಗ್ಡಮ್ ನಾಲ್ಕನೇ ಸ್ಥಾನದಲ್ಲಿದೆ. 186 ಸ್ಥಳಗಳಿಗೆ ಪ್ರವೇಶದೊಂದಿಗೆ ಯುನೈಟೆಡ್ ಸ್ಟೇಟ್ಸ್ ಎಂಟನೇ ಸ್ಥಾನದಲ್ಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೊದಲ ಬಾರಿಗೆ 185 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಮೂಲಕ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ. 62ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ಜಿಗಿಯುವ ಮುಖೇನ ವಿಶ್ವದ ಗಮನಸೆಳೆದಿದೆ. ವ್ಯವಹಾರ, ಪ್ರವಾಸೋದ್ಯಮ ಮತ್ತು ಹೂಡಿಕೆಗೆ ಜಾಗತಿಕ ಕೇಂದ್ರವಾಗಲು ಯುಎಇ ಪ್ರಯತ್ನಿಸುತ್ತಿರುವುದರ ಫಲ ಇದು ಎನ್ನುತ್ತಾರೆ ಹೆನ್ಲೆ ಅಂಡ್ ಪಾರ್ಟ್ನರ್ಸ್ ಸಂಸ್ಥೆಯ ಸಿಇಒ ಜುರ್ಗ್ ಸ್ಟೆಫೆನ್.

“ಒಂದು ದೇಶದ ವೀಸಾಮುಕ್ತ ಶ್ರೇಯಾಂಕಕ್ಕೂ ಅದರ ಆರ್ಥಿಕ ಸಮೃದ್ಧಿಗೂ ಬಲವಾದ ಸಂಬಂಧ ಇದೆ ಎನ್ನುವುದುನ್ನು ನಮ್ಮ ಸಂಶೋಧನೆ ಸತತವಾಗಿ ನಿರೂಪಿಸುತ್ತಾ ಬಂದಿದೆ. ಹೆಚ್ಚಿನ ವೀಸಾ-ಮುಕ್ತ ಶ್ರೇಯಾಂಕ ಹೊಂದಿರುವ ದೇಶಗಳು ಹೆಚ್ಚಿನ ತಲಾ ಜಿಡಿಪಿ ಹೊಂದಿರುವುದು ಕಂಡು ಬಂದಿದೆ. ಒಂದು ಕಾಲದಲ್ಲಿ ಅಮೆರಿಕ ಮತ್ತು ಬ್ರಿಟನ್‌ನ ಪಾಸ್‌ಪೋರ್ಟ್‌ಗಳನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತಿತ್ತು, ಆದರೆ ಈಗ ಆ ಯುಗ ಮುಗಿದಿದೆ. ಈಗ ಏಷ್ಯಾದ ದೇಶವು ವಿಶ್ವದ ಅತ್ಯಂತ ಶಕ್ತಿಶಾಲಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಪ್ರಪಂಚದಾದ್ಯಂತದ ಪಾಸ್‌ಪೋರ್ಟ್‌ಗಳ ಇತ್ತೀಚಿನ ಶ್ರೇಯಾಂಕವನ್ನು ತೋರಿಸುತ್ತದೆ.

ಭಾರತದ ನೆರೆಯ ಬಡ ಪಾಕಿಸ್ತಾನವು ಈ ಬಾರಿ 100 ದೇಶಗಳ ನಡುವೆ ಒಂದು ಸ್ಥಾನವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಬಲಗೊಂಡಿದೆ ಭಾರತದ ಪಾಸ್‌ಪೋರ್ಟ್ 2 ಅಂಕಗಳ ಜಿಗಿತದೊಂದಿಗೆ 82 ನೇ ಸ್ಥಾನವನ್ನು ಸಾಧಿಸಿದೆ. ಭಾರತೀಯ ಪಾಸ್‌ಪೋರ್ಟ್‌ಗಳು 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತವೆ. 2023 ರಲ್ಲಿ ಭಾರತದ ಜಾಗತಿಕ ಶ್ರೇಯಾಂಕವು 84 ನೇ ಸ್ಥಾನದಲ್ಲಿತ್ತು.


Share to all

You May Also Like

More From Author