ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೋನಲ್ ಕಮೀಷನರ್ ಈಗ ರಾಣೆಬೆನ್ನೂರ ನಗರಸಭೆ ಕಮೀಷನರ್..

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೋನಲ್ ಕಮೀಷನರ್ ಈಗ ರಾಣೆಬೆನ್ನೂರ ನಗರಸಭೆ ಕಮೀಷನರ್..

ಹುಬ್ಬಳ್ಳಿ:-ಕಳೆದ‌ ಎರಡು ವರ್ಷಗಳಿಂದ ಹುಬ್ಬಳ್ಳಿ-ದಾರವಾಡ ಮಹಾನಗರ ಪಾಲಿಕೆಯಲ್ಲಿ ವಲಯ ಆಯುಕ್ತರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಕೆಎಂಎಸ್ ಆಪೀಸರ ಫಕ್ಕೀರಪ್ಪ ಇಂಗಳಗಿ ಇನ್ಮೇಲಿಂದ ರಾಣೆಬೆನ್ನೂರ ನಗರಸಭೆಯ ಕಮೀಷನರ್ ಆಗಿ ಸೇವೆ ಸಲ್ಲಿಸಲಿದ್ದಾರೆ.

2005 ರಲ್ಲಿ ಪೋಲೀಸ ಇಲಾಖೆಗೆ ಸೇರಿ 2014ರವರೆಗೆ ಪೋಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.ನಂತರ 2014 ರಲ್ಲಿ‌ ಗ್ರಾಮ ಪಂಚಾಯತಿ ಪಿಡಿಓ ಆಗಿ ನೇಮಕಗೊಂಡು ಅಲ್ಲಿ 2019 ರವರೆಗೆ ಸೇವೆ.ನಂತರ ಮುಂಡರಗಿ ಪುರಸಭೆ ಮುಖ್ಯಾಧಿಕಾರಿಗಳಾಗಿ ಆಯ್ಕೆಯಾಗಿ.2022 ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ಎರಡು ವರ್ಷಸೇವೆ ಸಲ್ಲಿಸಿ ಈಗ ರಾಣೆಬೆನ್ನೂರ ನಗರ ಸಭೆಯ ಕಮೀಷನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

 

 

ಇವರ ಬದುಕೇ ಒಂದು ಚಾಲೇಂಜಿಂಗ್.ಮಾಡಬೇಕು ಅಂದಿದ್ದನ ಮಾಡಿಯೇ ಬಿಡುವವರು.ಪೋಲೀಸ ಆಗಿ ಪೋಲೀಸ ಇಲಾಖೆಯಲ್ಲಿ ಹೆಸರು ಮಾಡಿ ಪಂಚಾಯತ್ ರಾಜ್ ಇಲಾಖೆಯ ಪರೀಕ್ಷೆ ಬರೆದು ಅಲ್ಲಿಯೂ ಪಾಸ್ ಆಗಿ ಪಿಡಿಓ ಆಗಿ ಪಂಚಾಯತಿಗಳಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದವರು.ನಂತರ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕೆಎಂಎಸ್ ಪರೀಕ್ಷೆ ಬರೆದು ಅಲ್ಲಿಯೂ ಸಕ್ಷಸ್ ಆಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ನೇಮಕಗೊಂಡರು ಅಲ್ಲಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ,ವಲಯ ಆಯುಕ್ತರಾಗಿ ಸೇವೆ ಸಲ್ಲಿಸಿದ ಅವರು ಈಗ ರಾಣೆಬೆನ್ನೂರ ನಗರಸಭೆಯ ಕಮೀಷಮರ್.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author