ಇಂಟರ್ ಸ್ಟೇಟ್ ಕಳ್ಳನ ಹಿಸ್ಟರಿ ಬಿಚ್ವಿಟ್ಟ ಪೋಲೀಸ ಕಮೀಷನರ್.. ಪೈರಿಂಗ್ ಆಗಿದ್ದು ಹೀಗೆ ಅಂದ ಆಯುಕ್ತರು..
ಹುಬ್ಬಳ್ಳಿ:-ಇದೇ 17 ರಂದು ಭುವನೇಶ್ವರಿ ಗೋಲ್ಡ್ ಶಾಪ್ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಬಂಧಿಸಿ,ಕರೆದೊಯ್ಯುವಾಗ ಪೈರಿಂಗ್ ನಡೆದ ಘಟನೆ ಹಾಗೂ ಆರೋಪಿಯ ಹಿಸ್ಟರಿ ಬಿಚ್ಚಿಟ್ಟ ಪೋಲೀಸ ಕಮೀಷನರ್ ಎನ್ ಶಶಿಕುಮಾರ್..
ಗೋಲ್ಡ್ ಶಾಪ್ ನಲ್ಲಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಬಂಗಾರ,ಬೆಳ್ಳಿ ಕಳ್ಳತನವಾಗಿತ್ತು.
ಈ ಕೇಸ್ ಗೆ ಸಂಭಂದಿಸದಂತೆ ಮುಂಬೈ ಮೂಲದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿತ್ತು.ಹತ್ತು ದಿನ ನಿರಂತರ ಪ್ರಯತ್ನದಿಂದ ಓರ್ವನನ್ನ ಅರೆಸ್ಟ್ ಮಾಡಲಾಗಿದೆ.
ಇವತ್ತು ಆತ ಗಾಮನಗಟ್ಟಿ ಪ್ರದೇಶಕ್ಕೆ ಕರೆದುಕೊಂಡು ಹೋಗಿತ್ತು.ಸಹಚರನ್ನು ತೋರಿಸಲು ಕರೆದುಕೊಂಡು ಹೋಗಲಾಗಿತ್ತು.ಈ ವೇಳೆ ಆರೋಪಿ ಫರಾನ್ ಶೇಖ್ ತಪ್ಪಿಸಿಕೊಳ್ಳಲು ಯತ್ನಮಾಡಿದ್ದಾನೆ.ಆತನ ಮೇಲೆ ಫೈರಿಂಗ್ ಮಾಡಲಾಗಿದೆ…
ಫರಾನ್ ಶೇಖ ಗಾಮನ ಗಟ್ಟಿ ಪ್ರದೇಶದ ಇಬ್ಬರನ್ನು 2 ಸಾವಿರ ರೂ ಕೊಟ್ಟುಪರಿಚಯ ಮಾಡಿಕೊಂಡಿದ್ದ.
ಅವನುಅಂತರಾಜ್ಯ ಕಳ್ಳತನ ಆರೋಪಿ.ಕೊಲೆ,ಕಳ್ಳತನ,ಸೇರಿ ಅನೇಕ ಕೇಸ್ ಇವನ ಮೇಲಿವೆ.
ಗಾಮನಗಟ್ಟಿಗೆ ಕರೆದುಕೊಂಡು ಹೋದಾಗ ಆರೋಪಿಗಳನ್ನ ತೋರಿಸುತ್ತೇನೆಂದು ಕರೆದುಕೊಂಡು ಹೋಗಿದ್ದ.
ಆ ಸಮಯದಲ್ಲಿ ತಳ್ಳಿ ಕಲ್ಲು ತಗೆದುಕೊಂಡು ಹಲ್ಲೆಗೆ ಮುಂದಾಗಿದ್ದ.ನಮ್ಮ ಸಿಬ್ಬಂದಿಗಳಾದ ಸುಜಾತ,ಮಹೇಶ್ ಮೇಲೆ ಹಲ್ಲೆ ಮಾಡಿದ್ದಾನೆ.
ತಪ್ಪಿಸಿಕೊಂಡು ಓಡುವಾಗ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್ ಐ ಕವಿತಾ ಫೈರ್ ಮಾಡಿದ್ದಾರೆ…
ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ..
ಸದ್ಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಳಿದ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಲಾಗುವದು.
ಮಹಾರಾಷ್ಟ್ರದಿಂದ ಹುಬ್ಬಳ್ಳಿಗೆ ಬಂದಿದ್ರು.ಹುಬ್ಬಳ್ಳಿ,ಬೆಳಗಾವಿ,ವಿಜಯಪುರ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಪ್ಲ್ಯಾನ್.
ಮೂರು ಜನ ಕಳ್ಳತನ ಪ್ಲ್ಯಾನ್ ಮಾಡಲು ಹಾಕಿದ್ರು
ಇವರು ಬಂದ ತಕ್ಷಣ ಸ್ಥಳೀಯರನ್ನು ಹಣ ಕೊಟ್ಟು ಪರಿಚಯ ಮಾಡಿಕೊಂಡು ಕಳ್ಳತನಕ್ಕೆ ಪ್ಲ್ಯಾನ್..
ಇತರ ಆರೋಪಿಗಳು ಸಹ ಅಂತರರಾಜ್ಯ ಕಳ್ಳರು.
ಕಳ್ಳರನ್ನು ಅರೆಸ್ಟ್ ಮಾಡಲು ಇನ್ನು ಮೂರು ತಂಡ ಮಹಾರಾಷ್ಟ್ರದಲ್ಲಿ ಬೀಡು ಬಿಟ್ಟಿವೆ ಎಂದು ಕಮೀಷನರ್ ಹೇಳಿದ್ದಾರೆ.