ಮತ್ತೊಮ್ಮೆ ಚಿನ್ನ ಗೆಲ್ಲಲು ಪಣತೊಟ್ಟ ನೀರಜ್​ ಚೋಪ್ರಾ: ಭರ್ಜರಿ ಅಭ್ಯಾಸ

Share to all

ಕಳೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ ಭಾರತದ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ ಅವರು ಈ ಬಾರಿಯೂ ದೇಶಕ್ಕೆ ಚಿನ್ನ ಗೆಲ್ಲುವ ಪಣತೊಟ್ಟಿದ್ದಾರೆ. ಇದಕ್ಕಾಗಿ ಅವರು ಸಮುದ್ರದ ಆಳದಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ.

ಮಹತ್ವದ ಕ್ರೀಡಾಕೂಟವಾದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತ ಚಾಲನೆ ಸಿಗಲಿದೆ. ಹೀಗಾಗಿ ನೀರಜ್​ ಚೋಪ್ರಾ ಅವರು ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ.

ನೀರಿನಾಳದಲ್ಲಿ ಸ್ಕೂಬಾ ಡೈವ್ ಉಡುಪು ತೊಟ್ಟು ಜಾವೆಲಿನ್​ ಎಸೆಯುವಂತೆ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಸ್ವತಃ ನೀರಜ್​ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆಕಾಶದಲ್ಲೇ ಆಗಲಿ, ನೆಲದ ಮೇಲಾಗಲಿ, ಅಥವಾ ನೀರಿನಾಳದಲ್ಲೇ ಆಗಲಿ! ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿರುವೆ. ತರಬೇತಿ ಶುರುವಾಗಿದೆ ಎಂದು” ಎಂದು ಬರೆದುಕೊಂಡಿದ್ದಾರೆ

23 ವರ್ಷದ ನೀರಜ್ ಚೋಪ್ರಾ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಈ ಬಾರಿಯ ಒಲಿಂಪಿಕ್ಸ್​ನಲ್ಲಿ 90 ಮೀ. ದೂರ ಎಸೆಯುವ ವಿಶ್ವಾಸವಿದೆ ಎಂದಿದ್ದಾರೆ.


Share to all

You May Also Like

More From Author