ಬೆಂಗಳೂರು: ಸಿಎಂ ಸದನದಲ್ಲಿ ಏನು ಪ್ರಸ್ತಾವನೆ ಮಾಡಿದ್ದಾರೆ ಆ ಹಿನ್ನೆಲೆ ಒಂದೊಂದು ದಿನ ಒಂದೊಂದು ಹಗರಣ ಬಿಚ್ಚಿಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸಿಎಂ ಸದನದಲ್ಲಿ ಏನು ಪ್ರಸ್ತಾವನೆ ಮಾಡಿದ್ದಾರೆ ಆ ಹಿನ್ನೆಲೆ ಒಂದೊಂದು ದಿನ ಒಂದೊಂದು ಹಗರಣ ಬಿಚ್ಚಿಡುತ್ತೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿ ಕೊಟ್ಟಿದ್ದೇವೆ.
ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಪ್ರತಿಪಕ್ಷಗಳು ಅಡ್ಡಿ ಪಡಿಸಿದ ಕಾರಣ ಲಿಖಿತ ಉತ್ತರವನ್ನು ಸಿಎಂ ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು. ಬಿಜೆಪಿಯ ಹಗರಣವನ್ನೂ ಮುಂದಿಟ್ಟುಕೊಂಡು ಅವರಿಗೆ ಉತ್ತರ ನೀಡಿದ್ದೇವೆ. ಈ ಹಗರಣಗಳಿಗೆ ಅವರು ಉತ್ತರ ಕೊಡಲಿ. ಬಳಿಕ ಪಾದಯಾತ್ರೆ ಮಾಡಲಿ. ಯಡಿಯೂರಪ್ಪ ಭಾಗಿಯಾಗಿದ್ದಾರೋ, ಬೊಮ್ಮಾಯಿ ಭಾಗಿಯಾಗಿದ್ದಾರೋ ಎಂಬ ಬಗ್ಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದರು.