ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳ ಬಗ್ಗೆ ಸಮರ ಸಾರಿದ ಪೋಲೀಸ ಕಮೀಷನರ್. ಕೋರಿಯರ್,ಡೆಲೆವರಿ ಮತ್ತು ಟ್ರಾನ್ಸಪೋಟ್೯ ಮಾಲಿಕರೊಂದಿಗೆ ಸಭೆ.
ಹುಬ್ಬಳ್ಳಿ:-ಹುಬ್ಬಳ್ಳಿ- ಧಾರವಾಡದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೋಲೀಸ ಕಮೀಷನರ್ ಎನ್ ಶಶಿಕುಮಾರ್ ಸಮರ ಸಾರಿದ್ದಾರೆ.
ಅವಳಿ ನಗರಕ್ಕೆ ಕೋರಿಯರ್ ಮತ್ತು ಟ್ರಾನ್ಸಪೋಟ್೯ಗಳಲ್ಲಿ ಡ್ರಗ್ಸ್ ಬರುತ್ತದೆ ಅಂತಾ ಮಾಹಿತಿ ಕಲೆ ಹಾಕಿದ ಕಮೀಷನರ್ ಕೋರಿಯರ್ ,ಡೆಲೆವರಿ, ಮತ್ತು ಟ್ರಾನ್ಸ್ ಪೋಟ್೯ ಸೇವೆಗಳ ಮಾಲಿಕರ ಸಭೆ ಕರೆದು ಅವರೊಂದಿಗೆ ಈ ಮಾದಕ ವಸ್ತುಗಳ ಬಗ್ಗೆ ಚರ್ಚೆ ನಡೆಸಿ ಅವರಿಗೆ ಸೂಚನೆ ನೀಡಿದ್ದಾರೆ.
ಪದೇ ಪದೇ ಬೇರೇ ಬೇರೆ ಕಡೆಯಿಂದ ಒಬ್ಬರ ಹೆಸರಿನಲ್ಲಿ ಪಾರ್ಸಲ್ ಗಳು ಬರುತ್ತಿದ್ದರೆ ತಕ್ಷಣ ಹತ್ತಿರದ ಪೋಲೀಸ ಠಾಣೆಯ 112 ಗೆ ಕರೆ ಮಾಡಿ.ಇಲ್ಲವೇ 1930 ಕರೆ ಮಾಡಿ ಮಾಹಿತಿ ನೀಡುವಂತೆ ಕಮೀಷನರ್ ಸೂಚನೆ ಕೊಟ್ಟಿದ್ದಾರೆ.