ನಾಯಿ ಮಾಂಸ ಮಾರಾಟ ಆರೋಪ: ಹಿಂದೂ ಮುಖಂಡರಿಂದ ದಾಳಿ: 90 ಬಾಕ್ಸ್ ಗಳಲ್ಲಿದ್ದ 4500 ಕೆ.ಜಿ.‌ಮಾಂಸ

Share to all

ಬೆಂಗಳೂರು: ರಾಜಸ್ತಾನದಿಂದ ದಿನನಿತ್ಯ ರೈಲಿನ ಮುಖಾಂತರ ಕುರಿ ಮಾಂಸ ಹಾಗೂ ಮೀನಿನ ಜೊತೆ ಸಾವಿರಾರು ಕೆ.ಜಿ.ನಾಯಿ ಮಾಂಸ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕುರಿಮಾಂಸವಾದರೂ ಹಾಳಾಗಿರುವ ಸಾಧ್ಯತೆಯಿದ್ದು ಕ್ರಮಬದ್ಧವಾಗಿ ಸಾಗಾಟ ಮಾಡುತ್ತಿಲ್ಲ ಎಂಬ ಆಪಾದನೆ ಕೇಳಿಬಂದಿದ್ದು ಇದನ್ನೇ ನಗರ ಹೊಟೇಲ್ ರೆಸ್ಟೋರೆಂಟ್ ಗಳಿಗೆ ಮಾರಾಟ ಮಾಡಿ ಅವ್ಯವಹಾತವಾಗಿ ದಂಧೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಕಳೆದ ಜೂನ್‌ ತಿಂಗಳಲ್ಲಿ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಎಂಬುವರು ನಾಯಿ ಮಾಂಸ ಸಾಗಾಟದ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಪರ ಮುಖಂಡ ಪುನೀತ್ ಕೆರೆಹಳ್ಳಿ ನೇತೃತ್ವದ ಕಾರ್ಯಕರ್ತರು ಅವರು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರಯುಲು ನಿಲ್ದಾಣದಲ್ಲಿ ದಾಳಿ ನಡೆಸಿ ಪ್ರತಿಭಟಿಸಿದರು. 90 ಬಾಕ್ಸ್ ನಲ್ಲಿರುವ 4500 ಕೆ.ಜಿ.ಮಾಂಸವನ್ನ ತೆರೆದು ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಹಿಂದೂ ಮುಖಂಡ ಅಬ್ದುಲ್ ರಜಾಕ್ ಪರಿಶೀಲಿಸಿ ಇದು ನಾಯಿ ಮಾಂಸವಲ್ಲ ಕುರಿಮಾಂಸ ಸಮಜಾಯಿಷಿ ನೀಡಿದರು‌. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ‌. 90 ಬಾಕ್ಸ್ ನಲ್ಲಿ 4500  ಕೆ.ಜಿ.ಮಾಂಸ ಸಾಗಾಟ ಹಿನ್ನೆಲೆಯಲ್ಲಿ ಕೆಲವರನ್ನ ಪೊಲೀಸರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜಸ್ಥಾನ ಮತ್ತು ಗುಜರಾತ್‌ನಿಂದ ಸಾವಿರಾರು ಕೇಜಿ ಮಾಂಸವನ್ನು ಥರ್ಮಾಕೋಲ್ ಬಾಕ್ಸ್‌ನಲ್ಲಿ ತುಂಬಿ ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸುತ್ತಿದ್ದಾರೆ. ಅಲ್ಲಿಂದ ನಗರಕ್ಕೆ ತಲುಪಲು ನಾಲ್ಕೈದು ದಿನಗಳೇ ಬೇಕಾಗುತ್ತದೆ. ಕೇವಲ ಥರ್ಮಾಕೋಲ್‌ನಲ್ಲಿ ಐಸ್ ಗಡ್ಡೆಯೊಂದಿಗೆ ಮಾಂಸ ತುಂಬಿ ಕಳುಹಿಸುತ್ತಿದ್ದು, ಹಾಳಾಗಿರುವ ಸಾಧ್ಯತೆಗಳಿವೆ. ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ. ರೈಲಿನಲ್ಲಿ ಬರುವ ಥರ್ಮಾಕೋಲ್ ಬಾಕ್ಸ್‌ಗಳನ್ನು ಶಿವಾಜಿನಗರಕ್ಕೆ ಗೂಡ್ಸ್ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ಗೋದಾಮಿನಲ್ಲಿ ಇರಿಸುತ್ತಾರೆ.

ಅಲ್ಲಿ ಬಾಕ್ಸ್ ತೆಗೆದು ಕೆಮಿಕಲ್‌ನಲ್ಲಿ ಮಾಂಸವನ್ನು ತೊಳೆದು ಮತ್ತೆ ಹೊಸದಾಗಿ ಪ್ಯಾಕ್ ಮಾಡಿ ಸ್ಟಾರ್ ಹೋಟೆಲ್, ಕ್ಯಾಟರಿಂಗ್ ಸರ್ವಿಸ್‌ಗಳಿಗೆ ಮಾಂಸ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೊರರಾಜ್ಯದಿಂದ ಯಾವುದೇ ಮಾರ್ಗಸೂಚಿ ಪಾಲನೆ ಮಾಡದೆ ಮಾಂಸ ಪಾರ್ಸೆಲ್ ಪಡೆಯುತ್ತಿರುವ ದಂಧೆಗೆ ನಿರ್ಬಂಧಿಸಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


Share to all

You May Also Like

More From Author