ಆಸ್ಪತ್ರೆಗೆ ತೆರಳಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನ ಆರೋಗ್ಯ ವಿಚಾರಣೆ ಮಾಡಿದ ಸಚಿವ ಸಂತೋಷ ಲಾಡ್..

Share to all

ಆಸ್ಪತ್ರೆಗೆ ತೆರಳಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತನ ಆರೋಗ್ಯ ವಿಚಾರಣೆ ಮಾಡಿದ ಸಚಿವ ಸಂತೋಷ ಲಾಡ್ – ಆರೋಗ್ಯ ವಿಚಾರಿಸಿ ಕುಟುಂಬದವರೊಂದಿಗೆ ಕುಳಿತುಕೊಂಡು ಧೈರ್ಯ ಹೇಳಿ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಜನನಾಯಕ

ಹುಬ್ಬಳ್ಳಿ –

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತ ಸಚಿವ ಸಂತೋಷ ಲಾಡ್ ರ ಆಪ್ತರಾಗಿರುವ ಕಲ್ಲಯ್ಯ ಹಿರೇಮಠ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಧ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.ಇನ್ನೂ ಇತ್ತ ಈ ಒಂದು ಸುದ್ದಿಯನ್ನು ತಿಳಿದ ಸಚಿವ ಸಂತೋಷ ಲಾಡ್ ಸಭೆಯನ್ನು ಮುಗಿಸಿಕೊಂಡು ಆಸ್ಪತ್ರೆಗೆ ತೆರಳಿ ಆಪ್ತನ ಆರೋಗ್ಯವನ್ನು ವಿಚಾರಣೆ ಮಾಡಿದರು.ತೀವ್ರ ಅನಾರೋಗ್ಯಕ್ಕೀಡಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಲಘಟಗಿ ತಾಲೂಕಿನ‌ ಮುಂಚೂಣಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಆಪ್ತರ ಕಲ್ಲಯ್ಯ ಹಿರೇಮಠ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಇದೇ ವೇಳೆ ಅವರ ಕುಟುಂಬದವರೊಂದಿಗೆ ಕೆಲ ಸಮಯ ಕುಳಿತುಕೊಂಡು ಧೈರ್ಯ ಹೇಳಿ, ಅವರು ಶೀಘ್ರ ಗುಣಮುಖರಾಗಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು ಸಚಿವ ಸಂತೋಷ ಲಾಡ್ ಹೇಳಿದರು.ಅಲ್ಲದೇ ಕಲ್ಲಯ್ಯ ಹಿರೇಮಠ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಬಿಡುವಿಲ್ಲದ ಕೆಲಸ ಕಾರ್ಯ ಸಭೆ ಗಳ ನಡುವೆಯೂ ಕೂಡಾ ಸಚಿವ ಸಂತೋಷ ಲಾಡ್ ತಮಗಾಗಿ ಸಂಘಟನೆ ಮಾಡುತ್ತಾ ತಮ್ಮೊಂದಿಗೆ ಇರುವವರಿಗೆ ಸಮಯವನ್ನು ನೀಡಿ ಮಾದರಿಯಾದರು.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author