ಮುಸ್ಲೀಂಗೆ ಮತಾಂತರವಾಗುವಂತೆ ಕಿರುಕುಳ: ಠಾಣೆ ಮೆಟ್ಟಿಲೇರಿದ 2ನೇ ಹೆಂಡತಿ!

Share to all

ಹುಬ್ಬಳ್ಳಿ : ಎರಡನೇ ಪತ್ನಿಗೆ ಮತಾಂತರವಾಗುವಂತೆ ಕಿರುಕುಳ ನೀಡಿದ ಆರೋಪಿ ಪತಿ ಮುಜಾಹಿದ್ ಖಾನ್ ವಿರುದ್ಧ ದೂರು ದಾಖಲಾಗಿದೆ.  ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿಗೆ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಕಲಘಟಗಿ ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿದೆ.

ಕಲಘಟಗಿ ನಿವಾಸಿ ಆಗಿರುವ ಮಹಿಳೆ ಬೆಂಗಳೂರಿನಲ್ಲಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಜಾಹಿದ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾನೆ. ಇಬ್ಬರು ಸಹೋದ್ಯೋಗಿಗಳಾಗಿದ್ದರಿಂದ ಸ್ನೇಹ ಬೆಳೆದಿದೆ. ಸ್ನೇಹ ಪ್ರೇಮಕ್ಕೆ ತಿರುಗಿದೆ. ನಂತರ 2017ರಲ್ಲಿ ಮುಜಾಹಿದ್ ಖಾನ್ ಮತ್ತು ಮಹಿಳೆ ಮದುವೆ ಆಗಿದ್ದಾರೆ.

ಆದರೆ, ಮುಜಾಹಿದ್ ಖಾನ್​ಗೆ ಒಂದು ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ವಿಚಾರವನ್ನು ಮುಚ್ಚಿಟ್ಟು ಮುಜಾಹಿದ್ ಖಾನ್ ಎರಡನೇ ಮದುವೆಯಾಗಿದ್ದಾನೆ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಮಹಿಳೆಗೆ ಮುಜಾಹಿದ್ ಖಾನ್​ನ ಮೊದಲನೇ ಮದುವೆ ವಿಚಾರ ತಿಳಿದಿದೆ. ಮತ್ತು ಮುಜಾಹಿದ್ ಖಾನ್ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಮಹಿಳೆಗೆ ಒತ್ತಾಯ ಮಾಡಲು ಆರಂಭಿಸಿದ್ದಾನೆ. ಈ ವಿಚಾರವಾಗಿ ಇಬ್ಬರು ಜಗಳವಾಡಿದ್ದಾರೆ. ಇಬ್ಬರ ನಡುವೆ ಬಿರುಕು ಮೂಡಿದೆ.

ನಂತರ ಮಹಿಳೆ ಕಲಘಟಗಿಗೆ ವಾಪಸ್​ ಆಗಿದ್ದಾಳೆ. ಬಳಿಕ, ಮುಜಾಹಿದ್ ಖಾನ್ ಕಲಘಟಗಿಗೆ ಬಂದು “ನೀನು ಎಲ್ಲಿಗಾದರೂ ಹೋಗು ನಿನಗೆ ಚಾಕು ಹಾಕುತ್ತೇನೆ‌” ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿದ ಮಹಿಳೆ ಶ್ರೀರಾಮಸೇನೆ ಸೇನೆ ಆರಂಭಿಸಿರುವ ಲವ್‌ ಜಿಹಾದ್ ವಿರುದ್ಧದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಆಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.


Share to all

You May Also Like

More From Author