ಮದುವೆ ಆಗುವುದಾಗಿ ವಂಚನೆ: ವಿಚ್ಛೇದಿತ ಮಹಿಳೆಯಿಂದ ಲಕ್ಷ-ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ!

Share to all

ಪೀಣ್ಯ ದಾಸರಹಳ್ಳಿ: ಬೆಂಗಳೂರು ಉತ್ತರ ತಾಲ್ಲೋಕಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ನಕಲಿ ಪೊಲೀಸ್ ಓರ್ವ ಲಕ್ಷಾಂತರ ರೂ. ವಂಚಿಸಿರುವಂತಹ ಘಟನೆ ನಡೆದಿದೆ. ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವುದಾಗಿ ಬೆದರಿಕೆಯನ್ನು ಕೂಡ ಮಾಡಿದ್ದಾನೆ ಎಂಬ ಆರೋಪ ಕೂಡ ಮಾಡಲಾಗಿದೆ. ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮದುವೆ ಆಗುವುದಾಗಿ ಮಹಿಳೆಗೆ ವಂಚಿಸಿ, ಲವ್, ಸೆಕ್ಸ್, ದೋಖಾ ಮಾಡಿರುವಂತಹ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿಕ್ಕಭಾಣಾವಾರದ ಗಣಪತಿನಗರದಲ್ಲಿ ನಡೆದಿದೆ. 40 ವರ್ಷದ ಮಹಿಳೆಯ ಬಳಿ 41 ಲಕ್ಷ ರೂ. ಹಣ ಮತ್ತು 5 ಲಕ್ಷ ರೂ. ಮೌಲ್ಯದ ಎಲ್‌ಐಸಿ ಬಾಂಡನ್ನು ಕಿತ್ತುಕೊಂಡು ಮೋಸ ಮಾಡಿದ್ದಾನೆ. ಚಿಕ್ಕಬಾಣಾವಾರ ವ್ಯಾಪ್ತಿಯ ಗಣಪತಿನಗರದ ನಿವಾಸಿ ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಎಂಬುವವರಿಂದ ವಂಚನೆ ಆರೋಪ ಮಾಡಲಾಗಿದೆ.

11 ವರ್ಷದ ಹಿಂದೆ ಮಹಿಳೆಗೆ ವಿಚ್ಛೇದನವಾಗಿದ್ದೂ ಬಳಿಕ ಇಬ್ಬರಿಗೂ ಪರಿಚಯವಾಗಿದೆ. ವಿಶ್ವನಾಥ ಅಲಿಯಾಸ್​ ವಿಷ್ಣುಗೌಡ ಪೊಲೀಸ್​ ಡ್ರೆಸ್​​ನಲ್ಲಿ ಇರುವ ಫೋಟೋ ಹಾಗೂ ಗನ್​ ಇರುವುದನ್ನು ನೋಡಿರುವ ಮಹಿಳೆ ಪೊಲೀಸ್​ ಹುದ್ದೆಯಲ್ಲಿರಬಹುದು ಎಂದು ನಂಬಿದ್ದಾರೆ.ವಿಷ್ಣುಗೌಡ ನಾನು ಪೋಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ ಇದ್ದಿನಿ ಎಂದು ನಂಬಿಸಿ ಮಹಿಳೆಗೆ ವಂಚಿಸಿದ್ದಾನೆ. ಆದರೆ ಆತ ನಕಲಿ ಪೊಲೀಸ್​ ಎಂಬುದು ನಂತರ ಗೊತ್ತಾಗಿದೆ.

ಮಹಿಳೆ ತಂಗಿಗೆ ಖಾಸಗಿ ಅಂಗ ತೋರಿಸಿ ವಿಕೃತಿ: ಮನೆಗೆ ನುಗ್ಗಿ ಮಹಿಳೆಯ ತಂದೆ ತಾಯಿ ಮೇಲೆ ಕೂಡ ಹಲ್ಲೆ ಮಾಡಿದ್ದು, ಮಹಿಳೆಯ ತಂಗಿ ಮುಂದೆ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ವಿಕೃತಿ ಮೇರೆದಿದ್ದಾನೆ.ಮಹಿಳೆಯ ಅತ್ತಿರ ಬಲವಂತವಾಗಿ ಚೆಕ್ ಗಳಿಗೆ ಸಹಿಯನ್ನು ಮಾಡಿಸಿಕೊಂಡಿದ್ದಾನೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಬಾಣಾವರ ಬ್ರಾಂಚ್​ನ ಚೆಕ್ ನಂಬರ್ 183258, 183259, 183260 ಮತ್ತು 183261 ನಂಬರಿನ ಚೆಕ್​ಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಂಡಿದ್ದಾನೆ.

ಕೆಲವು ತಿಂಗಳುಗಳ ಹಿಂದೆ ಪಕ್ಕದ ಮನೆಯ ಮಹಿಳೆಯ ಜೊತೆಗೆ ಗಾಡಿ ನಿಲ್ಲಿಸುವ ವಿಚಾರಕ್ಕೆ ಮಹಿಳೆಯ ಜೊತೆಗೆ ಹಾಗೂ ಅವರ ಕುಟುಂಬದ ಜೊತೆಗೆ ಜಗಳವನ್ನು ಕೂಡ ಮಾಡಿದ್ದಾನೆ.ಅ ಮಹಿಳೆಗೆ ಮನಸ್ಸೋ ಇಚ್ಚೆ ಹಲ್ಲೆ ಕೂಡ ಮಾಡಿದ್ದಾನೆ ಈ ಘಟನೆಯೂ ಕೂಡ ಸೋಲದೇವನಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು, ಇಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ವೈರಲ್ ಮಾಡುವ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share to all

You May Also Like

More From Author