ಹುಬ್ಬಳ್ಳಿ
ಪ್ರತಿಯೊಬ್ಬರಿಗೂ ಜೀವನದಲ್ಲಿ ಅಪ್ಪ, ಅಮ್ಮನನ್ನ ಬಿಟ್ಟರೆ ಅಕ್ಕ ಅನ್ನೋಳು ಇದ್ದರೆ ಅವಳೇ ತಮ್ಮಂದಿರಗೆ ತಂದೆ,ತಾಯಿ ಇದ್ದಂತೆ.ತಾಯಿಯ ಸ್ಥಾನದಲ್ಲಿ ನಿಂತು ತಮ್ಮಂದಿರನ್ನ ನೋಡಿಕೊಳ್ಳುತ್ತಾರೆ.ಆದರೆ ಇತ್ತೀಚೆಗೆ ಜಗತ್ತು ಬೆಳೆದಂತೆ ಅಕ್ಕ,ಅಣ್ಣ ,ತಮ್ಮ ತಂದೆ,ತಾಯಿ ಅದ್ಯಾವ ಸಂಭಂದಗಳು ಮಾಯವಾಗುತ್ತಿರುವ ದಿನ ಮಾನದಲ್ಲಿ ಇಲ್ಲೊಂದು ಕುಟುಂಬದಲ್ಲಿ ಅಕ್ಕ,ತಮ್ಮ ಮಾದರಿಯಾಗಿದ್ದಾರೆ.
ಹುಟ್ಟಿನಿಂದ ಹಿಡಿದು.ಬೆಳೆದು ದೊಡ್ಡವರಾಗಿ ಮದುವೆ ಮಕ್ಕಳು ಅಂತಾ ಆದರೂ ಇಲ್ಲಿ ತಮ್ಮಾ ಅನ್ನುವ ಜೀವಕ್ಕೆ ಅಕ್ಕನೇ ಉಸಿರು, ಹೀಗಿರುವ ಹುಬ್ಬಳ್ಳಿಯ ಮೋದಿನಬಿ ಪಾಗದ ಹಾಗೂ ಕುಸುಗಲ್ ಗ್ರಾಮದ ಇಮಾಮಸಾಬ ಗುದಗಿ ಜೀವನದಲ್ಲಿ ಅಕ್ಕ ತಮ್ಮನಾಗಿ ಬೆಳೆದದ್ದಲ್ಲದೇ ಸಾವಿನಲ್ಲೂ ಒಂದಾಗಿ ಸಾವನ್ನಪ್ಪಿದ್ದಾರೆ.ಕುಸುಗಲ್ ಗ್ರಾಮದ ತಮ್ಮ ಇಮಾಮಸಾಬ ನಿನ್ನೆ ರಾತ್ರಿ ಹ್ರದಯಾಘಾತದಿಂದ ಸಾವನ್ನಪ್ಪುತ್ತಾರೆ. ತಮ್ಮನ ಸಾವಿನ ಸುದ್ದಿ ತಿಳಿದ ಅಕ್ಕ ಮೋದಿನಬಿ ಕುಸುಗಲ್ ಗ್ರಾಮಕ್ಕೆ ಹೋಗಿ ತಮ್ಮ ಸಾವನ್ನಪ್ಪಿರುವುದನ್ನು ನೋಡಿ ಅಲ್ಲಿಯೇ ಅಕ್ಕನು ಜೀವ ಬಿಟ್ಟಿದ್ದಾಳೆ.ಜೀವನದಲ್ಲಿ ಅಕ್ಕ ತಮ್ಮ ಸಮಾಜದಲ್ಲಿ ಮಾದರಿಯಾಗಿದ್ದರೆ ಸಾವಿನಲ್ಲೂ ಒಂದಾಗಿ ಮಾದರಿಯಾಗಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ
9448334896