Bengaluru: ನಾಯಿ ಮಾಂಸ ದಂಧೆ ಕೇಸ್; ಆಹಾರ ಇಲಾಖೆ ಅಲರ್ಟ್, 9 ರೆಸ್ಟೋರೆಂಟ್, ಹೋಟೆಲ್ ಗಳಿಗೆ ನೋಟಿಸ್!

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮಾಂಸ ಪ್ರಿಯರು ಬೆಚ್ಚಿ ಬೀಳಿಸೋ ಸುದ್ದಿ ವರದಿ ಆಗಿತ್ತು. ಅಂತರರಾಜ್ಯದಿಂದ ನಾಯಿ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದೇ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೂಡ ಪೊಲೀಸರು ಚೂರುಕುಗೊಳಿಸಿದ್ದಾರೆ. ಇದೀಗ ಕಳಪೆ ಮಾಂಸ ದಂಧೆ ಆರೋಪ ಕೇಳಿ ಬಂದ ಬೆನ್ನಲ್ಲೇ ಆಹಾರ ಇಲಾಖೆ ಅಲರ್ಟ್ ಆಗಿದೆ. ಘಟನೆ ಸಂಬಂಧ ಬೆಂಗಳೂರಿನ 9 ರೆಸ್ಟೋರೆಂಟ್, ಹೋಟೆಲ್ ಗಳಿಗೆ ನೋಟಿಸ್ ಜಾರಿ ಮಾಡಿದೆ.

9 ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್​ ನೀಡಲಾಗಿದ್ದು, ವ್ಯವಹಾರದ ದಾಖಲೆ ಸಮೇತ ವಿಚಾರಣೆಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈಗಾಗಲೆ ಇಬ್ಬರು ವಿಚಾರಣೆಗೆ ಹಾಜರಾಗಿದ್ದು, ಉಳಿದವರು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಶನಿವಾರ ಅಬ್ದಲ್​ ರಜಾಕ್​ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರವೂ ಕೂಡ ಅಬ್ದುಲ್ ರಜಾಕ್ ವಿಚಾರಣೆ ಹಾಜರಾಗಲಿದ್ದಾರೆ.

ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸಾಗಾಟ ವದಂತಿ ಬೆನ್ನಲ್ಲೆ ಆಹಾರ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು ಕೋಲ್ಡ್ ಸ್ಟೋರೇಜ್​ನಲ್ಲಿರುವ ಮತ್ತು ಅಂಗಡಿಗಳಲ್ಲಿನ ಮಾಂಸಗಳ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. -18 ಡಿಗ್ರಿ ಸ್ಟೋರೇಜ್​ನಲ್ಲಿಟ್ಟ ಮಾಂಸ ಹಾನಿಕಾರಕವಲ್ಲ. ಆದರೆ ಅದಕ್ಕೆ ಬಳಸುವ ರಾಸಾಯನಿಕ ಅಪಾಯಕಾರಿ ಈ ಹಿನ್ನೆಲೆಯಲ್ಲಿ ಮಾಂಸದ ಮಾದರಿಗಳನ್ನು ಸಂಗ್ರಹಿಸುವಂತೆ ಆಹಾರ ಇಲಾಖೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮಾಂಸ ಕಲಬೆರಕೆಯಾಗಿದೆ ಅಂತ ಪತ್ತೆಯಾದರೆ ಕ್ರಮ ಕೈಗೊಳ್ಳುವುದಾಗಿ ಮಾಂಸದಂಗಡಿ ಮಾಲೀಕರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಯುಕ್ತ ಶ್ರೀನಿವಾಸ್​ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.


Share to all

You May Also Like

More From Author