ಬೆಂಗಳೂರು:- ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ವಿವಾಹಿತ ಮಹಿಳೆ ಓರ್ವರು ವಿಡಿಯೋ ಮಾಡುತ್ತಾ ನೇಣು ಹಾಕಿಕೊಂಡ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆಡಿದೆ. 25 ವರ್ಷದ ಮಾನಸ ಆತ್ಮಹತ್ಯೆ ಮಾಡಿಕೊಂಡು ಮಹಿಳೆ. ಗಂಡನ ಮನೆಯಲ್ಲಿ ವಾಸವಿದ್ದ ಮಾನಸ ಭಾನುವಾರ ಸಂಜೆ 4 ಗಂಟೆಯ ವೇಳೆಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿನಲ್ಲಿ ನೇತಾಡುವ ಮುನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.
ಮಾನಸ 6 ವರ್ಷದ ಹಿಂದೆ ದಿಲೀಪ್ ಎಂಬುವನ ಜತೆ ವಿವಾಹವಾಗಿದ್ದರು ದಂಪತಿಗೆ 5 ವರ್ಷದ ಒಂದು ಹೆಣ್ಣು ಮಗು ಇದೆ. ಆದರೆ, ದಿಲೀಪ್ ಒಂದೂವರೆ ವರ್ಷದಿಂದ ಬೇರೊಂದು ಮಹಿಳೆ ಸಹವಾಸ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಪತಿ ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಬೇಸತ್ತ ಮಾನಸ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮಾನಸ ಅಂದ್ರಹಳ್ಳಿ ಗಂಡನ ಮನೆಯಲ್ಲಿ ವಾಸವಿದ್ದರು. ಭಾನುವಾರ ಸಂಜೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಬಳಿಕ ದಿಲೀಪ್ ಮನೆಯವರ ವಿರುದ್ಧ ಮಾನಸ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ. ಠಾಣೆ ಮುಂಭಾಗವೇ ಗಂಡನ ಕಡೆಯವರಿಗೆ ಹಲ್ಲೆ ನಡೆಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.