ತಂದೆಯೇ ಮಗಳ ಕುತ್ತಿಗೆ ಕೊಯ್ದು ಕೊಲೆ. ಮರ್ಯಾದಾ ಹತ್ಯೆ.
ದೇವನಹಳ್ಲಿ
ಮಗಳೊಬ್ಬಳ ಕತ್ತನ್ನು ಸೀಳಿದ್ದಲ್ಲದೇ ಮ್ಯೆ ಮೇಲೆ ಎಲ್ಲಿ ಬೇಕೆಂದರಲ್ಲು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ದೇಚನಹಳ್ಳಿಯಲ್ಲಿ ನಡೆದಿದೆ.ಅನ್ಯ ಜಾತಿಯ ಹುಡುಗನೊಂದಿಗೆ ಸಂಬಂಧವನ್ನು ಮಗಳು ಇಟ್ಟುಕೊಂಡಿದ್ದಳಂತೆ ಹೀಗಾಗಿ ಮಗಳನ್ನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಕ್ರೂರಿ ತಂದೆ. ಬೆಂಗಳೂರು ಹೊರವಲಯ ದೇವನಹಳ್ಳಿ ಸಮೀಪದ ಬಿದಲೂರು ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿನಿ ಕವನ (20) ಮೃತ ವಿದ್ಯಾರ್ಥಿನಿಯಾಗಿದ್ದು ಆರೋಪಿ ಮಂಜುನಾಥ್ ತನ್ನ ಮಗಳ ಸಂಬಂಧದ ಬಗ್ಗೆ ತಿಳಿದ ನಂತರ ವಿಚಲಿತನಾಗಿದ್ದ ಮತ್ತು ಹುಡುಗ ಬೇರೆ ಜಾತಿಗೆ ಸೇರಿದವನಾಗಿದ್ದನು ಎಂದು ತಿಳಿದಾಗ ಆತನ ಕೋಪ ತೀವ್ರಗೊಂಡಿದೆ.ತನ್ನ ಸಂಬಂಧವನ್ನು ಮುಂದುವರಿಸದಂತೆ ಮಗಳು ಕವನಾಗೆ ಎಚ್ಚರಿಕೆ ನೀಡಿದ್ದನಂತೆ ಮಂಜುನಾಥ.ತನ್ನ ಸಂಬಂಧವನ್ನ ಮುಂದುವರಿಸದಂತೆ ಮಂಜುನಾಥ್ ಕವನಾಗೆ ಎಚ್ಚರಿಕೆ ನೀಡಿದ್ದ ಆದ್ರೆ ಆಕೆ ತನ್ನ ತಂದೆಯ ಮಾತನ್ನು ಕೇಳಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ-ಮಗಳ ನಡುವೆ ವಾಗ್ವಾದ ನಡೆದಿದ್ದು ಇದರಿಂದ ಕೋಪಗೊಂಡ ಮಂಜುನಾಥ್ ಚಾಕುವಿನಿಂದ ಕವನ ಕತ್ತು ಸೀಳಿ ಕಾಲು ಮತ್ತು ಕೈಗಳಿಗೆ ಹಲವು ಬಾರಿ ಇರಿದಿದ್ದಾನೆ.ಕೊಲೆಯ ನಂತರ ಆರೋಪಿಗಳು ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಮಂಜುನಾಥ್ ಅವರ ಕಿರಿಯ ಮಗಳು ತನ್ನ ಸಂಬಂಧದ ವಿರುದ್ಧದ ವಿರೋಧದ ಬಗ್ಗೆ ಪೊಲೀಸರನ್ನ ಸಂಪರ್ಕಿಸಿದ್ದಳು ಕಳೆದ ವಾರ, ಆಕೆ ಸರ್ಕಾರಿ ವೀಕ್ಷಣಾ ಗೃಹಕ್ಕೆ ಹೋಗಿದ್ದು, ಯಾವುದೇ ವೆಚ್ಚದಲ್ಲಿ ತನ್ನ ಸಂಗಾತಿಯನ್ನ ಮದುವೆಯಾಗುವುದಾಗಿ ಸಮರ್ಥಿಸಿಕೊಂಡಿದ್ದಳಂತೆ.ಘಟನೆಯ ನಂತರ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಉದಯ ವಾರ್ತೆ ದೇವನಹಳ್ಳಿ(ಬೆಂಗಳೂರು)