ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ ಹೆಂಡತಿ..!

Share to all

ತುಮಕೂರು: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನಿಗೆ ಕುಮ್ಮಕ್ಕು ನೀಡಿ, ಗಂಡನನ್ನೇ ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಹೌದು  ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಹೆಂಡತಿ ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಎದೆಗೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಮಾಡಿಸಿ ಬಳಿಕ ಅಪಘಾತವೆಂದು ನಾಟಕವಾಡಿದ್ದಾಳೆ.

ಪ್ರಕಾಶ್ (30) ಮೃತ ದುರ್ದೈವಿ. ಹರ್ಷಿತಾ ಕೊಲೆ ಮಾಡಿಸಿದ ಮಹಿಳೆ. ಸದ್ಯ ಘಟನೆ ಸಂಬಂಧ ಹರ್ಷಿತಾಳನ್ನು ಬಂಧಿಸಲಾಗಿದ್ದು ಆಕೆಯ ಸಹೋದರ, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ನಿವಾಸಿಯಾಗಿರುವ ಹರ್ಷಿತಾ ಹಾಗೂ ಕಲಬುರ್ಗಿ ಜಿಲ್ಲೆಯ ನಿವಾಸಿಯಾಗಿರುವ ಪ್ರಕಾಶ್ ಪರಸ್ಪರ ಪ್ರೀತಿಸಿ ಮೂರು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ. ಪ್ರಕಾಶ್ ಪೋಸ್ಟ್ ಆಫೀಸ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ.

ಮದುವೆಯಾಗಿ ಮಗು ಇದ್ದರೂ ಹರ್ಷಿತಾಗೆ ಅಕ್ರಮ ಸಂಬಂಧವಿತ್ತು. ತನ್ನ ಕುಟುಂಬದ ಓರ್ವನ ಜೊತೆ ಸಂಬಂಧ ಹೊಂದಿದ್ದಳು. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡ ಆಗಬಹುದು ಎಂಬ ಕಾರಣಕ್ಕೆ ಹರ್ಷಿತಾ ತನ್ನ ಸಹೋದರ ಹಾಗೂ ಪ್ರಿಯತಮನ ಜೊತೆ ಸೇರಿಕೊಂಡು ಪತಿಯ ಕೊಲೆ ಮಾಡಿಸಿದ್ದಾಳೆ. ಬಳಿಕ ಆಕ್ಸಿಡೆಂಟ್ ಎಂದು ಬಿಂಬಿಸಲು ಮುಂದಾಗಿದ್ದಾಳೆ. ಪ್ರಕಾಶ್ ಎದೆ ಭಾಗಕ್ಕೆ ಡ್ರಾಗರ್​ನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಇದರಿಂದಾಗಿ ಇದೊಂದು ಕೊಲೆ ಎಂದು ಸುಲಭವಾಗಿ ತಿಳಿದು ಬಂದಿದ್ದು ಸದ್ಯ ಕೊರಟಗೆರೆ ಪೊಲೀಸರು ಹರ್ಷಿತಾಳನ್ನು ಬಂಧಿಸಿದ್ದಾರೆ. ಹರ್ಷಿತಾ ಸಹೋದರ ಮತ್ತು ಪ್ರಿಯತಮನಿಗಾಗಿ ಹುಡುಕಾಟ ನಡೆಯುತ್ತಿದೆ.


Share to all

You May Also Like

More From Author