ಬಟ್ಟೆ ಇಲ್ಲದೇ ರಸ್ತೆಯಲ್ಲಿ ಓಡಾಟ: ಜೋಡಿ ವರ್ತನೆಗೆ ವ್ಯಾಪಕ ಆಕ್ರೋಶ!

Share to all

ನಾಗ್ಪುರ:- ಸಾಮಾಜಿಕ ಜಾಲತಾಣಗಳಲ್ಲಿ ಸಹಜವಾಗಿ ರೊಮ್ಯಾನ್ಸ್ ವಿಡೀಯೋ, ಅಶ್ಲೀಲ ವಿಡಿಯೋ ಬರುತ್ತಿರುತ್ತವೆ. ಇದೀಗ ಅಂತದ್ದೇ ವಿಚಿತ್ರ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಹೌದು, ಜೋಡಿಯೊಂದು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ತಿರುಗಾಡಿದ್ದಾರೆ. ಇದನ್ನು ಕಂಡು ಜನ ಶಾಕ್‌ ಆಗಿದ್ದು, ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ

ನಗರದ ಲಕ್ಷ್ಮೀನಗರ ಚೌಕ್ ಬಳಿ ಘಟನೆ ನಡೆದಿದ್ದು, ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೇ ಹಾದು ಹೋಗುತ್ತಿದ್ದ ನಗರದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

ಸಿಕ್ಕಿರುವ ಮಾಹಿತಿ ಪ್ರಕಾರ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಕ್ಷ್ಮೀನಗರ ಚೌಕ್‌ನಿಂದ ಶ್ರದ್ಧಾನಂದಪೇಟ್ ಚೌಕ್‌ಗೆ ಹೋಗುವ ರಸ್ತೆಯಲ್ಲಿ ಜೋಡಿಯೊಂದು ಜಗಳ ಮಾಡಿಕೊಂಡು ಯುವಕನೊಬ್ಬ ಕಾರಿನಿಂದ ಇಳಿದಿದ್ದಾನೆ. ಅವನ ಮೈಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅದೇ ಸ್ಥಿತಿಯಲ್ಲಿದ್ದ ಯುವತಿಯೊಬ್ಬಳು ಕೂಡ ಕಾರಿನಿಂದ ಇಳಿದು ಯುವಕನ ಬಳಿ ಕ್ಷಮೆ ಯಾಚಿಸುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ಯುವಕ ಫುಟ್ ಪಾತ್ ಬದಿಯಲ್ಲಿದ್ದ ತೆರೆದ ಮನೆಯತ್ತ ತೆರಳಿದ್ದಾನೆ. ಆಗ ರಸ್ತೆಯಲ್ಲಿ ಕೆಲವೇ ವಾಹನಗಳು ಸಂಚರಿಸುತ್ತಿದ್ದವು. ಹೀಗಿರುವಾಗ ಎರಡು ಬೈಕ್‌ಗಳಲ್ಲಿ ಹೋಗುತ್ತಿದ್ದ ಕೆಲ ಹುಡುಗರು ಈ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಬಜಾಜ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಠಲ್ ರಜಪೂತ್ ದಂಪತಿಯನ್ನು ಭಾನುವಾರ ಬೆಳಿಗ್ಗೆ ಗುರುತಿಸಲಾಯಿತು ಆದರೆ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ತೋರುತ್ತಿದ್ದರಿಂದ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡಿಲ್ಲ. ಘಟನೆ ಬಗ್ಗೆ ಪರಿಶೀಲಿಸಲಾಗಿದೆ. “ನಾವು ದಂಪತಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಕರೆಸಿದ್ದೇವೆ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನಿಯಂತ್ರಿತ ನಡವಳಿಕೆಯ ವಿರುದ್ಧ ಸಮರ್ಪಕವಾಗಿ ಸಲಹೆ ನೀಡಲಾಯಿತು. ದಂಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದರಿಂದ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.


Share to all

You May Also Like

More From Author