ಬೆಂಗಳೂರು:- ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್ ಇಲಾಖೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅದರಂತೆ ಇಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ನೇತೃತ್ವದಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಕಮಿಷನರ್, ‘ಫ್ಲೆಕ್ಸ್, ಬ್ಯಾನರ್ಗಳ ಅಳವಡಿಕೆ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಮಟ್ಟಹಾಕಲು ಚರ್ಚೆ ಮಾಡಲಾಗಿದೆ ಎಂದರು.
ಇನ್ನು ಅನಧೀಕೃತ ಬ್ಯಾನರ್ಗಳ ತೆರವಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ ನಡೆಸಲಿದ್ದು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ಗಳನ್ನು ಪೊಲೀಸರು ತೆರೆವುಗೊಳಿಸಲಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ‘ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಿದ್ದು, ದೂರು ಬಂದ ತಕ್ಷಣವೇ ಪೊಲೀಸರು, ಬ್ಯಾನರ್, ಫ್ಲೆಕ್ಸ್, ಹೋಲ್ಡಿಂಗ್ಸ್ ತೆರವು ಕಾರ್ಯ ನಡೆಸಲಿದ್ದಾರೆ.
ಇನ್ನು ಸಭೆಯಲ್ಲಿ ಎರಡು ಅಂಶಗಳ ಮಹತ್ವದ ಚರ್ಚೆಯಾಗಿದೆ. ಮೊದಲನೆದಾಗಿ ಎಲ್ಲೆಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಲಾಗಿದೆ, ಅವುಗಳ ತೆರವು ಹಾಗೂ ಕ್ರಮಕೈಗೊಳ್ಳುವುದು. ಹಾಗೂ ಪ್ರಮುಖವಾಗಿ ಯಾವ ಯಾವ ಕಾನೂನು ಕ್ರಮ ಕೈಗೊಳ್ಳಬಹುದು. ಅವೆಲ್ಲವನ್ನೂ ಬಳಸಿ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೇದಾಗಿ ಈ ರೀತಿ ಫ್ಲೆಕ್ಸ್ ಗಳ ಹಾಕದಂತೆ ನಿಗಾ ವಹಿಸುವುದು. ರಾತ್ರಿ ಗಸ್ತಿನಲ್ಲಿರುವ ಸಿಬ್ಬಂದಿಗಳಿಗೂ ಸಹ ಸೂಚನೆ ನೀಡಲಾಗಿದೆ.
ಫ್ಲೆಕ್ಸ್ ಹಾಕುವ ವೇಳೆ ಅದನ್ನು ಪೂರ್ವ ನಿರ್ಧರಿತ ನಂಬರ್ಗೆ ಮಾಹಿತಿ ನೀಡುವುದು. ಅವುಗಳ ಮೇಲೆ ಎಫೆಕ್ಟಿವ್ ಆಕ್ಷನ್ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಪೊಲೀಸರಿಗೆ ಬಿಬಿಎಂಪಿಯವರು ನೀಡಿರುವ ನಂಬರ್ಗೆ ಮಾಹಿತಿ ನೀಡಲಾಗುವುದು. ಈ ವೇಳೆ ಬಿಬಿಎಂಪಿಯಿಂದ ಅವುಗಳು ಅಧಿಕೃತವೋ ಅಥವಾ ಅನಧಿಕೃತವೋ ಎಂದು ಪರಿಶೀಲಿಸಲಾಗುತ್ತದೆ. ನಂತರ ಬಿಬಿಎಂಪಿಯಿಂದ ಈ ಬಗ್ಗೆ ದೂರು ನೀಡಲಾಗುತ್ತೆ. ನಂತರ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು