ಸ್ಪೋಟಕ ಆಲ್ರೌಂಡರ್ ಔಟ್, ಇನ್ಸ್ಟಾದಲ್ಲಿ RCB ಅನ್ ಫಾಲೋ ಮಾಡಿದ ಮ್ಯಾಕ್ಸ್ ವೆಲ್!

Share to all

ಈ ಬಾರಿಯ IPL ಮೆಗಾ ಹರಾಜಿಗೂ ಮುನ್ನ ಭಯಂಕರ ಸುದ್ದಿಯೊಂದು ಹೊರ ಬಿದ್ದಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ರನ್ನು ಆರ್ ಸಿಬಿ ಕೈಬಿಡುವುದು ಬಹುತೇಕ ಖಚಿತವಾಗಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ತಂಡದ ಇನ್‌ಸ್ಟಾಗ್ರಾಂ ಹ್ಯಾಂಡಲ್ ಅನ್ನು ಅನ್ ಫಾಲೋ ಮಾಡಿದ್ದಾರೆ.

ಕಳೆದ ಮೂರು ವಾರಗಳ ಹಿಂದೆಯೇ ಮ್ಯಾಕ್ಸ್​ವೆಲ್​​ಗೆ ಆರ್​​ಸಿಬಿ ಈ ಮಾಹಿತಿ ನೀಡಿದೆ. ಇದರಿಂದ ಸಿಟ್ಟಿಗೆದ್ದ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸ್​ವೆಲ್​ ಆರ್​​ಸಿಬಿಯನ್ನು ಇನ್​ಸ್ಟಾಗ್ರಾಮ್​​ನಲ್ಲಿ ಮಾತ್ರವಲ್ಲ ಟ್ವಿಟರ್​ನಲ್ಲೂ ಅನ್​ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬರುವ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗಾಗಿ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಈ ವರ್ಷದ ಕೊನೆಗೆ 2025ರ ಐಪಿಎಲ್​ ಮೆಗಾ ಆಕ್ಷನ್​ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್​ ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬಹುದು. ಬಳಿಕ ಉಳಿದ ಆಟಗಾರರನ್ನು ಆಕ್ಷನ್​ಗಾಗಿ ಬಿಡಲೇಬೇಕಿದೆ.

ಇನ್ನು, ಆರ್​​ಸಿಬಿ ತಂಡವು ವಿರಾಟ್​ ಕೊಹ್ಲಿ ಹೊರತುಪಡಿಸಿ ಮತ್ಯಾರನ್ನ ರೀಟೈನ್​ ಮಾಡಿಕೊಳ್ಳಲಿದೆ ಎಂದು ಇದುವರೆಗೂ ಸ್ಪಷ್ಟನೆ ನೀಡಿಲ್ಲ. ರೀಟೈನ್​​​ ಲಿಸ್ಟ್​ನಲ್ಲಿ ಕೊಹ್ಲಿ ಜೊತೆಗೆ ವಿಲ್​ ಜಾಕ್ಸ್​​, ಮೊಹಮ್ಮದ್​ ಸಿರಾಜ್​ ಇದೆ ಎಂದು ಹೇಳಲಾಗುತ್ತಿದೆ

ಗ್ಲೆನ್​ ಮ್ಯಾಕ್ಸ್​ವೆಲ್​​ ಹೆಸರು ಇತ್ತು ಎಂದು ವರದಿ ಆಗಿತ್ತು. ಈ ಬೆನ್ನಲ್ಲೇ ಗ್ಲೆನ್​ ಮ್ಯಾಕ್ಸ್​​​ವೆಲ್​ ಅವರನ್ನು ರೀಟೈನ್​ ಮಾಡಿಕೊಳ್ಳುವುದು ಡೌಟ್​ ಎಂದು ಆರ್​​ಸಿಬಿ ಮೂಲಗಳು ತಿಳಿಸಿವೆ. ಈಗ ಮ್ಯಾಕ್ಸ್​ವೆಲ್​ ಆರ್​​ಸಿಬಿ ಖಾತೆಯನ್ನು ಇನ್​ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದು, ಇದು ಖಚಿತವಾಗಿದೆ.


Share to all

You May Also Like

More From Author