ಸರಕಾರದಿಂದ ನೀಡುವ ಅನ್ನಕ್ಕು ಕನ್ನ ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು.!!ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯ ಫಲಾನುಭವಿಗಳಿಗೆ ಫಂಗನಾಮ..

Share to all

ಸರಕಾರದಿಂದ ನೀಡುವ ಅನ್ನಕ್ಕು ಕನ್ನ ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು.!!ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯ ಫಲಾನುಭವಿಗಳಿಗೆ
ಫಂಗನಾಮ..

ಉತ್ತರ ಕನ್ನಡ:-“”ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ್ ಪಂಗಡದ ಸಿದ್ದಿ ಸಮುದಾಯದ ಫಲಾನುಭವಿಗಳಿಗೆ ಸರಕಾರದಿಂದ ನಿಡುವ ಅನ್ನಕ್ಕು ಕನ್ನ”ಹಾಕಿದರಾ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಅನ್ನೋ ಪ್ರಶ್ನೆ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡತಾ ಇದೆ.

ಕರ್ನಾಟಕ ಸರಕಾರ 2019 ನೇ ಸಾಲಿನಲ್ಲಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ್ ಪಂಗಡದ ಕೊರಗ,ಕಾಡು ಕುರುಬ್,ಸೊಲಿಗ,ಎರವ,ಸಿದ್ದಿ,ಗೊಂಡ,ಮಲೈಕುಡಿ,ಗೌಡಲು, ಮತ್ತು ಹಸಲರು ಜನಾಂಗದ ಸಮುದಾಯದವರಿಗೆ ಮಳೆಗಾಲದಲ್ಲಿ ಕೆಲಸ ಸಿಗದ ಪ್ರಯುಕ್ತ ಜೀವನ ನಿರ್ವಹಣೆಗಾಗಿ ಮತ್ತು ಇವರುಗಳ ಅಪೌಷ್ಟಿಕತೆ ಯನ್ನು ನಿವಾರಿಸಲು ಪಿ.ಡಿ.ಎಸ್ ರವರು ನೀಡುವ ಆಹಾರ ಪದಾರ್ಥಗಳ ಜೊತೆ ಹೆಚ್ಚುವರಿಯಾಗಿ ಈ ಯೋಜನೆ ಅಡಿ ಆಹಾರ ಪದಾರ್ಥಗಳನ್ನು ವರ್ಷದಲ್ಲಿ 6 ತಿಂಗಳ ಅವದಿಗೆ (ಜೂನ್ ದಿಂದ ಡಿಸೆಂಬರ್ ) ಮಾತ್ರ ಸಿಮಿತಗೊಳಿಸಿ ಯೊಜನೆಯನ್ನು ಅನುಷ್ಟಾನಗೊಳಿಸಿರುತ್ತಾರೆ.

ಒಂದು ಕುಟುಂಬಕ್ಕೆ ಪ್ರತಿ ತಿಂಗಳು ಪೂರೈಸುವ ಆಹಾರ ಪದಾರ್ಥಗಳ ವಿವರ.
1)ಅಕ್ಕಿ-8 ಕೆ.ಜಿ.
2)ತೋಗರಿಬೇಳೆ-3 ಕೆ.ಜಿ.
3)ಕಡಳೆಕಾಳು-1ಕೆ.ಜಿ.
4)ಶೆಂಗಾ-1ಕೆ.ಜಿ.
5)ಅಲಸಂದಿ-2ಕೆ.ಜಿ
6)ಹೆಸರುಕಾಳು-1ಕೆ.ಜಿ
7)ಸಕ್ಕರೆ-1ಕೆ.ಜಿ
8)ಬೆಲ್ಲ-1ಕೆ.ಜಿ
9)ಮೊಟ್ಟೆ-30
10)ಅಡುಗೆ ಎಣ್ಣೆ-2ಲಿಟರ್
11)ನಂದಿನಿ ತುಪ್ಪ-1/2ಕೆ.ಜಿ

ಸರ್ಕಾರ ಆದೇಶ ಸಂಖ್ಯೆ:ಸಕಇ 207 ಪವಯೋ 2018,ದಿನಾಂಕ 22/07/2019 ರಂತೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 2011 ನೇ ಜನಗಣತಿಯಂತೆ 34239 ಸಂಖ್ಯೆ ಪರಿಶಿಷ್ಟ್ ಜನರಿದ್ದು.

ಅದರಲ್ಲಿ ಹಳಿಯಾಳ ಜೊಯಿಡಾ ದಾಂಡೇಲಿ ಮತಕ್ಷೇತ್ರ ಹಾಗೂ ಯಲ್ಲಾಪುರ ಮುಂಡಗೋಡ ಮತಕ್ಷೇತ್ರದಲ್ಲಿ ಸಿದ್ದಿ ಸಮುದಾಯದ ಕುಟುಂಬದ ಜನರು ಹೆಚ್ಛಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ ಮತ್ತು ಬಡತನ ಹಾಗೂ ಅನಕ್ಷರತೆಯಿಂದ ಕೂಡಿರುತ್ತಾರೆ.

ಆದರೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಪೂರೈಸುವ ಆಹಾರಪದಾರ್ಥ ಕಳಪೆ ಗುಣಮಟ್ಟದಿಂದ ಕೂಡಿರುತ್ತದೆ ಹಾಗೂ ನಿಯಮದಂತೆ 75 ಮೈಕ್ರೊ ಏಕಬಳಕೆ ಪ್ಲಾಷ್ಟಿಕ್ ಬ್ಯಾನ್ ಮಾಡಿದರೂ ಸಹಿತ ಅದರಲ್ಲೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದಾರೆ.ಮತ್ತು ಯಾವುದೇ sealed pack ನಲ್ಲಿ ಪೂರೈಸುತ್ತಿಲ್ಲ.

ಎಲ್ಲ ಆಹಾರ ಪದಾರ್ಥ ಇರುವ ಕಿಟ್ ನ ಮೇಲೆ ಯೊಜನೆಯ ಹೆಸರನ್ನು ನಮೂದಿಸದೇ ಕಾನೂನು ಪಾಲನೆ ಮಾಡುತ್ತಿಲ್ಲಾ. ಟೆಂಡರ್ ಪಡೆದ ಗುತ್ತಿಗೆದಾರರು ಹಾಗೂ ಅಧಿಕಾರಿ ವರ್ಗದವರ ಒಳ ಒಪ್ಪಂದ ನಡೆದಿರುವ ಬಗ್ಗೆ ಸಂಶಯ ಮೂಡುತ್ತಿದೆ.

ಮುಖ್ಯವಾಗಿ ಸಿದ್ದಿ ಸಮೂದಾಯದ ಅನೇಕರು ಬಡ ವರ್ಗ ಹಾಗೂ ಅನಕ್ಷರಸ್ಥರು ಇರುವುದರಿಂದ ಜಿಲ್ಲಾ ಪರಿಶಿಷ್ಟ್ ವರ್ಗ ಕಲ್ಯಾಣಾಧಿಕಾರಿ ಉತ್ತರ ಕನ್ನಡ ಜಿಲ್ಲೆಯವರು ನಿಡಿದ ಗುರುತಿನ ಚಿಟಿಯಲ್ಲಿ ಗುತ್ತಿಗೆ ಪಡೆದ ಮೊಹರು ಇರುವ ಸೀಲ್ ನ್ನು ಅಗಷ್ಟ್ ತಿಂಗಳು ಬರುವ ಮೊದಲೇ ಅಗಷ್ಟ್ ತಿಂಗಳ ಆಹಾರ ಪದಾರ್ಥ ಪೂರೈಸಲಾಗಿದೆ ಎಂದು ನಮೂದಿಸಿರುವುದು ನೊಡಿದರೆ ಪರಿಶಿಷ್ಟರ ಅನ್ನಕ್ಕೂ ಕನ್ನ ಹಾಕಿರುವುದು ಮೆಲ್ನೊಟಕ್ಕೆ ಕಾಣಿತ್ತಿದೆ.

ಕಾರಣ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾಡಳಿತ ತಾಲೂಕಾಡಳಿತ ಎಚ್ಚೆತ್ತು ಸಂಬಂದಪಟ್ಟ ಅಧಿಕಾರಿ ಹಾಗೂ ಗುತ್ತಿಗೆ‍ದಾರರ ಮೇಲೆ ಕ್ರಮ ಕೈಗೊಂಡು ಪರಿಶಿಷ್ಟ್ ಸಮೂದಾಯದವರಿಗೆ ಸಲ್ಲುವ ಆಹಾರ ಪದಾರ್ಥ ಗುಣಮಟ್ಟದಿಂದ ಹಾಗೂ ಸರಿಯಾದ ಪ್ಯಾಕಿಂಗ್ ನಲ್ಲಿ ಯೊಜನೆಯ ಹೆಸರು ನಮೂದಿಸಿ ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ಯೊಜನೆ ತಲುಪುವಂತೆ ಆಗಲಿ ಎಂಬುದು ಸಾರ್ವಜನಿಕರ ಆಗ್ರಹ.

ಉದಯ ವಾರ್ತೆ
ಉತ್ತರ ಕನ್ನಡ.


Share to all

You May Also Like

More From Author