ಬಹು ದೊಡ್ಡ ಅಂತಾರಾಜ್ಯ ಗಾಂಜಾ ಮತ್ತು ಹವಾಲಾ ಕುಳ ಬಂಧನ..888 ಗ್ರಾಂ ಗಾಂಜಾ.ಲಕ್ಷ ಲಕ್ಷ ಹಣ ವಶ..

Share to all

ಬಹು ದೊಡ್ಡ ಅಂತಾರಾಜ್ಯ ಗಾಂಜಾ ಮತ್ತು ಹವಾಲಾ ಕುಳ ಬಂಧನ..888 ಗ್ರಾಂ ಗಾಂಜಾ.ಲಕ್ಷ ಲಕ್ಷ ಹಣ ವಶ..

ಹುಬ್ಬಳ್ಳಿ:-ರೈಲ್ವೆ ಸ್ಟೇಷನ್ ಹತ್ತಿರ ಗಾಂಜಾ ಸಾಗಟ ಮಾಡುತ್ತಿದ್ದ ಆರೋಪಿಯನ್ನು ‌ಬಂಧಿಸಿ 888 ಗ್ರಾಂ ಗಾಂಜಾ, 96.50 ಲಕ್ಷ ರೂ., ಕಾರು ಹಾಗೂ ವಿವಿಧ ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ರಾಜಸ್ಥಾನ ಮೂಲದ ಓಂ ಪ್ರಕಾಶ ಬಾರಮೇರ ಬಂಧಿತ ಆರೋಪಿ. ಖಚಿತ ಮಾಹಿತಿ ಆಧರಿಸಿ ಶಹರ ಪೊಲೀಸ್ ಠಾಣೆಯ ಅಧಿಕಾರಿ ನೇತೃತ್ವದ ತಂಡ ಕಾರ್ಯಾಚರಣೆ‌ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ರೈಲ್ವೆ ಪೊಲೀಸ್ ಸ್ಟೇಷನ್ ಹತ್ತಿರ ಬಂಧಿಸಿದಾಗ ೨೪೫ ಗ್ರಾಂ ಗಾಂಜಾ ದೊರೆಕಿದೆ. ಬಳಿಕ ವಿಚಾರಣೆ ನಡೆಸಿದಾಗ ಕೇಶ್ವಾಪುರದಲ್ಲಿ ವಾಸವಿದ್ದ ಮನೆಯಲ್ಲಿ ಗಾಂಜಾ ಮತ್ತಷ್ಟು ಗಾಂಜಾ ಸಿಕ್ಕಿದೆ.

ಆರೋಪಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಹಣ ಹೂಡಿಕೆ ಜನಸಾಮಾನ್ಯರಿಗೆ ವಂಚಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರತಿ ಠಾಣೆಗೆ ಗಾಂಜಾ ತನಿಖೆ ನಡೆಸಲು ಓರ್ವ ಅಧಿಕಾರಿ‌ ನೇಮಿಸಲಾಗಿದೆ. 70 ಪ್ರಕರಣ ದಾಖಲಾಗಿದೆ.315 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಈ ವೇಳೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಚಿಕ್ಕಮಠ, ಶಿವಪ್ರಕಾಶ ನಾಯಕ ಸೇರಿದಂತೆ ಶಹರ ಠಾಣೆ ಸಿಪಿಐ ತಹಶೀಲ್ದಾರ ಇದ್ದರು

ಉದಯ ವಾರ್ತೆ.
ಹುಬ್ಬಳ್ಳಿ.


Share to all

You May Also Like

More From Author