ಸಾಮಾನ್ಯವಾಗಿ ಯುವಜನರು ತನ್ನ ತಂದೆ ತಾಯಿಯರನ್ನು ನಂಬುವುದಕ್ಕಿಂತ ಹೆಚ್ಚಾಗಿ ಸ್ನೇಹಿತರನ್ನು ನಂಬುತ್ತಾರೆ. ಆದ್ರೆ ಸ್ನೇಹಕ್ಕೆ ನಂಬಿಕೆ ದ್ರೋಹವಾದಂತ ಘಟನೆ ನಡೆದಿದೆ. ಹೌದು ಸ್ನೇಹಿತೆ ಕೆಲಸ ಸಿಕ್ಕಿದ ಖುಷಿಯನ್ನು ಹಂಚಿಕೊಂಡಿದ್ದಕ್ಕೆ ಪಾರ್ಟಿ ಕೇಳಿದ್ದಾನೆ. ಸರಿ ಆಯ್ತು ನೀನು ಏನು ಕೇಳುತ್ತೀಯಾ ಆ ಪಾರ್ಟಿ ಕೊಡುವುದಾಗಿ ಹೇಳಿದ್ದಾಳೆ. ಆಗ ಎಣ್ಣೆ ಪಾರ್ಟಿ ಕೊಡಿಸಲು ಕೇಳಿದ್ದಾನೆ. ಇದಕ್ಕೊಪ್ಪಿದ ಗೆಳತಿ ಆತ ಹೇಳಿದ ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದಾಳೆ. ಇನ್ನು ಪಾರ್ಟಿಗೆ ಬರುವಾಗ ಯುವತಿಯ ಸ್ನೇಹಿತ ಇನ್ನೊಬ್ಬ ತನ್ನ ಗೆಳಯನನ್ನು ಕೊತೆಗೆ ಕರೆದುಕೊಂಡು ಬಂದಿದ್ದಾನೆ.
ಅಲ್ಲಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಆಗ ಇಬ್ಬರೂ ಯುವಕರು ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದಾರೆ. ಇದಾದ ನಂತರ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ರೆಸ್ಟೋರೆಂಟ್‌ನ ಕೋಣೆಯೊಂದರಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಜು.29ರ ಸೋಮವಾರ ಸಂಜೆ ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ ಬಾರ್‌ಲ್ಲಿ ನಡೆದಿದೆ. ಯುವತಿಯ ಬಾಲ್ಯದ ಸ್ನೇಹಿತ ಗೌತಮ್ ರೆಡ್ಡಿ ಮತ್ತು ಆತನ ಸಾಮಾನ್ಯ ಸ್ನೇಹಿತ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.